ಬ್ರಿಟನ್ ಮೂಲದ ಪ್ರಜೆಗೆ ಆಸ್ಟ್ರೇಲಿಯಾ ಸೆನೆಟ್ ಅಧ್ಯಕ್ಷ!
ಆಸ್ಟ್ರೇಲಿಯಾದ ಸೆನೆಟ್ ಅಧ್ಯಕ್ಷ ಸ್ಟೀಫನ್ ಪ್ಯಾರಿ ದ್ವಿಪೌರತ್ವ ಹೊಂದಿರುವ ಸಾಧ್ಯತೆಗಳು ಬೆಳಕಿಗೆ ಬಂದಿದೆ.

Published On :
ಕ್ಯಾನ್ಬೆರಾ: ಆಸ್ಟ್ರೇಲಿಯಾದ ಸೆನೆಟ್ ಅಧ್ಯಕ್ಷ ಸ್ಟೀಫನ್ ಪ್ಯಾರಿ ದ್ವಿಪೌರತ್ವ ಹೊಂದಿರುವ ಸಾಧ್ಯತೆಗಳು ಬೆಳಕಿಗೆ ಬಂದಿದೆ. ಅಧಿಕಾರಕ್ಕೆ ಅನರ್ಹರಾದ ಆಸ್ಟ್ರೇಲಿಯಾದ ಮಾಜಿ ಉಪ ಪ್ರಧಾನಿ ಬರ್ನಬಿ ಜಾಯ್ಸ್ ಸೇರಿದಂತೆ ಇತರ ಐವರು ರಾಜಕಾರಣಿಗಳಂತೆಯೇ ಸ್ಟೀಫನ್ ಪ್ಯಾರಿ ಸಹ ದ್ವಿಪೌರತ್ವ ಹೊಂದಿದ್ದು, ಈ ಐವರು ರಾಜಕಾರಣಿಗಳ ಸಾಲಿಗೆ ಸೇರುವ ಸಾಧ್ಯತೆ ದಟ್ಟವಾಗಿದೆ.
ಸ್ಟೀಫನ್ ಪ್ಯಾರಿ ಈಗ ಆಸ್ಟ್ರೇಲಿಯಾ ಸರ್ಕಾರದ ಭಾಗವಾಗಿದ್ದು, ತನ್ನ ತಂದೆಯ ಆನುವಂಶಿಕವಾಗಿ ಬ್ರಿಟನ್ ಪೌರತ್ವ ಪಡೆದುಕೊಂಡಿರುವ ಸಾಧ್ಯತೆ ಇದೆ ಎಂದು ಬಿಬಿಸಿ ಹೇಳಿದೆ. ದ್ವಿಪೌರತ್ವ ಹೊಂದಿರುವವರನ್ನು ರಾಜಕಾರಣದಲ್ಲಿ ಆಯ್ಕೆ ಮಾಡಬಾರದು ಎಂಬುದು ಆಸ್ಟ್ರೇಲಿಯಾದ ನಿಯಮವಾಗಿದೆ.
ಬ್ರಿಟನ್ ಗೃಹ ಇಲಾಖೆಯಿಂದ ತಮ್ಮ ಅಲ್ಲಿನ ಪೌರತ್ವ ಖಾತ್ರಿಯಾದರೆ ಆಸ್ಟ್ರೇಲಿಯಾ ಸೆನೆಟ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಟೀಫನ್ ಪ್ಯಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾAustraliaಬ್ರಿಟನ್ ಪೌರತ್ವSenate President Stephen ParryUK citizenshipಸೆನೆಟ್ ಅಧ್ಯಕ್ಷಸ್ಟೀಫನ್ ಪ್ಯಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


