ವಿಶ್ವದ ಸುರಕ್ಷಿತ ನಗರಗಳ ಪಟ್ಟಿ-2017: ಮೊದಲ ಸ್ಥಾನದಲ್ಲಿ ಟೋಕಿಯೋ, 43 ನೇ ಸ್ಥಾನದಲ್ಲಿ ದೆಹಲಿ!
2017 ರ ಆರ್ಥಿಕ ಸುರಕ್ಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಟೋಕಿಯೋ ನಗರ ಮೊದಲ ಸ್ಥಾನ ಪಡೆದಿದ್ದು, 43 ನೇ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಇದೆ.

Published On :
ನವದೆಹಲಿ: 2017 ರ ಆರ್ಥಿಕ ಸುರಕ್ಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಟೋಕಿಯೋ ನಗರ ಮೊದಲ ಸ್ಥಾನ ಪಡೆದಿದ್ದು, 43 ನೇ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಇದೆ.
ಆರ್ಥಿಕ ಗುಪ್ತಚರ ವಿಭಾಗದಿಂದ ಬಿಡುಗಡೆಯಾಗಿರುವ ವರದಿಯನ್ನು ಡಿಜಿಟಲ್, ಆರೋಗ್ಯ, ಮೂಲಭೂತ ಸೌಕರ್ಯ, ವೈಯಕ್ತಿಕ ಸುರಕ್ಷತೆ ಸೇರಿದಂತೆ 49 ಅಂಶಗಳನ್ನಾಧರಿಸಿ ತಯಾರಿಸಲಾಗಿದೆ. ಇದೇ ವೇಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನೂ ವರದಿ ತಯಾರಿಸುವ ವೇಳೆ ಪರಿಗಣಿಸಲಾಗಿದ್ದು, ಕೊನೆಯ 10 ನಗರಗಳಲ್ಲಿ ಢಾಕಾ, ಕರಾಚಿ ಸಹ ಇವೆ.
ಲಂಡನ್ ಪ್ಯಾರಿಸ್ ನಂತಹ ಸಂಪತ್ಭರಿತ ನಗರಗಳೂ ಸಹ ಭಯೋತ್ಪಾದಕರ ಗುರಿಯಾಗುತ್ತಿವೆ ಎಂದು ವರದಿಯಲ್ಲಿ ಆತಂಕ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


