ವಿಶ್ವ ಶೌಚಾಲಯ ದಿನದ ಅಭಿಯಾನಕ್ಕೆ ಬೆಂಬಲ ಕೋರಲು ಗುರ್ಮಿತ್ ಮತ್ತು ಹನಿಪ್ರೀತ್ ರನ್ನು ಆಹ್ವಾನಿಸಿದ ವಿಶ್ವ ಸಂಸ್ಥೆ!
ಮುಂದಿನ ತಿಂಗಳು ನವೆಂಬರ್ 19 ವಿಶ್ವ ಶೌಚಾಲಯ ದಿನ. ಈ ಸಂದರ್ಭದಲ್ಲಿ ವಿಶ್ವ ಸಂಸ್ಥೆಗೆ ನೀರಿನ ರಕ್ಷಣೆ...

Published On :
ಯುನೈಟೆಡ್ ನೇಷನ್: ಮುಂದಿನ ತಿಂಗಳು ನವೆಂಬರ್ 19 ವಿಶ್ವ ಶೌಚಾಲಯ ದಿನ. ಈ ಸಂದರ್ಭದಲ್ಲಿ ವಿಶ್ವ ಸಂಸ್ಥೆಗೆ ನೀರಿನ ರಕ್ಷಣೆ, ಶುಚಿತ್ವದ ಬಗ್ಗೆ ಅದರ ಜೊತೆ ಕೈ ಜೋಡಿಸಿ ಕೆಲಸ ಮಾಡುವ ವಿಭಾಗ ಹಾಗೂ ಸಂಸ್ಥೆಯ ಅಧಿಕೃತ ಟ್ವಿಟ್ಟರ್ ನಲ್ಲಿ ಇಂದು ಮಾಡಲಾಗಿರುವ ಪೋಸ್ಟ್ ಇದೀಗ ವೈರಲ್ ಆಗಿದೆ. ದಿನದ ಅತಿದೊಡ್ಡ ತಮಾಷೆ ಎಂದು ಅದರಲ್ಲಿ ಬರೆಯಲಾಗಿತ್ತು. ಈ ಪೋಸ್ಟ್ ಟ್ರಾಲ್ ಆಗುತ್ತಿದ್ದಂತೆ ಪೋಸ್ಟ್ ನ್ನು ತೆಗೆದುಹಾಕಲಾಗಿದೆ.
ವಿಶ್ವ ಶೌಚಾಲಯ ದಿನದಂದು ಶುಚಿತ್ವಕ್ಕೆ ಹನಿಪ್ರೀತ್ ಇನ್ಸಾನ್ ಮತ್ತು ಗುರ್ಮೀತ್ ರಾಮ್ ರಹೀಂ ಕೈ ಜೋಡಿಸುವಂತೆ ಕೋರಿ ಅವರ ಹೆಸರನ್ನು ಟ್ಯಾಗ್ ಮಾಡಲಾಗಿದೆ.ವಿಶ್ವ ಶೌಚಾಲಯ ದಿನದ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸುವಂತೆ ಇಬ್ಬರನ್ನೂ ಆಹ್ವಾನಿಸಲಾಗಿದೆ.
ವಿಪರ್ಯಾಸವೆಂದರೆ ಸ್ವಘೋಷಿತ ದೇವ ಮಾನವ ಗುರ್ಮೀತ್ ರಾಮ್ ರಹೀಂಗೆ ಅತ್ಯಾಚಾರ ಕೇಸಿನಲ್ಲಿ 20 ವರ್ಷ ಜೈಲು ಶಿಕ್ಷೆಯಾಗಿದೆ. ಆತನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಳನ್ನು ನಿನ್ನೆ ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಈಕೆ ಕಳೆದೊಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು.
ವಿಶ್ವ ಸಂಸ್ಥೆಯ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಆಗುತ್ತಿದ್ದಂತೆ ಜನರು, ಇದು ದಿನದ ಬಹುದೊಡ್ಡ ಜೋಕ್ ಎಂದು ವ್ಯಂಗ್ಯವಾಡಿದ್ದಾರೆ.
ಭಾರತದ ಈ ವಿವಾದಿತ ವ್ಯಕ್ತಿಗಳನ್ನು ಆಹ್ವಾನಿಸಿರುವ ವಿಶ್ವ ಸಂಸ್ಥೆಯ ಕ್ರಮ ಅನೇಕರಿಗೆ ಆಶ್ಚರ್ಯವನ್ನುಂಟುಮಾಡಿದೆ. ತಮ್ಮ ಅಭಿಯಾನಕ್ಕೆ ಆಹ್ವಾನಿಸುವ ವ್ಯಕ್ತಿಗಳ ಪರಿಸ್ಥಿತಿಯನ್ನು ವಿಶ್ವ ಸಂಸ್ಥೆಯ ಅಧಿಕಾರಿಗಳು ತಿಳಿದುಕೊಳ್ಳುವುದಿಲ್ಲವೇ ಎಂಬ ಪ್ರಶ್ನೆ, ಸಂದೇಹಗಳು ಕಾಡುತ್ತಿವೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
World Toilet Dayವಿಶ್ವ ಶೌಚಾಲಯ ದಿನವಿಶ್ವ ಸಂಸ್ಥೆUnited NationsGurmeet Ram RahimHoneypreet Insanಹನಿಪ್ರೀತ್ ಇನ್ಸಾನ್ಗುರ್ಮೀತ್ ರಾಮ್ ರಹೀಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


