ಲಾಸ್ ವೆಗಾಸ್ ನ ಸಂಗೀತ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: 20 ಸಾವು,100 ಕ್ಕೂ ಹೆಚ್ಚು ಮಂದಿಗೆ ಗಾಯ
ಲಾಸ್ ವೆಗಾಸ್ ನಲ್ಲಿ ಭಾನುವಾರ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಗುಂಡಿನ ದಾಳಿ ಸಂಬವಿಸಿದೆ.ದಾಳಿಗೊಳಗಾದ ಹಲವರು ಆಸ್ಪತ್ರೆ ಸೇರಿದ್ದಾರೆ.

Published On :
ಲಾಸ್ ವೆಗಾಸ್: ಲಾಸ್ ವೆಗಾಸ್ ನಲ್ಲಿ ಭಾನುವಾರ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಗುಂಡಿನ ದಾಳಿ ಸಂಬವಿಸಿದೆ.ದಾಳಿಗೊಳಗಾದ ಹಲವರು ಆಸ್ಪತ್ರೆ ಸೇರಿದ್ದಾರೆ.
ರೂಟ್ ನಂ 91 ಹಾರ್ವೆಸ್ಟ್ ಫೆಸ್ಟಿವಲ್ ಓರ್ವ ಬಂದೂಕುಧಾರಿ ಸತತವಾಗಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನುವ ಮಾಹಿತಿ ತಿಳಿದ ಪೋಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದರು.
ಯುನಿವರ್ಸಿಟಿ ಮೆಡಿಕಲ್ ಸೆಂಟರ್ ನ ವಕ್ತಾರ ಡ್ಯಾನಿಟಾ ಕೋಹೆನ್ "ಗುಂಡಿನ ದಾಳಿಯಿಂದ ಗಾಯಗೊಂಡ ಹಲವಾರು ಜನರನ್ನು ಲಾಸ್ ವೆಗಾಸ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತಾಗಿ ನನಗೆ ಹೆಚ್ಚಿನ ಮಾಹಿತಿ ಇನ್ನೂ ತಿಳಿದಿಲ್ಲ" ಎಂದಿದ್ದಾರೆ.
ಘಟನೆ ನಡೆದ ಲಾಸ್ ವೆಗಾಸ್ ಸ್ಟ್ರಿಪ್ ಮತ್ತು ಇಂಟರ್ಸ್ಟೇಟ್ 15 ಮಾರ್ಗವನ್ನು ಪೋಲೀಸ್ ಅಧಿಕಾರಿಗಳು ಮುಚ್ಚಿದ್ದಾರ.
ಮ್ಯಾಂಡಲೆ ಬೇ ಹೊಟೇಲ್ ಮತ್ತು ಕ್ಯಾಸಿನೊದಿಂದ ಭಾನುವಾರದ ಘಟನೆಗೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಘಟನೆಯ ಕುರಿತಂತೆ ಸಿಕ್ಕಿರುವ ಇತ್ತೀಚಿನ ಮಾಹಿತಿ ಪ್ರಕಾರ ಘಟನೆಯಲ್ಲಿ 20 ಜನ ಮೃತರಾಗಿದ್ದು 100ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Las Vegasಲಾಸ್ ವೆಗಾಸ್Music festivalUniversity Medical CenterLas Vegas StripMandalay Bay Hotel and Casinoಸಂಗೀತ ಕಾರ್ಯಕ್ರಮಯೂನಿವರ್ಸಿಟಿ ಮೆಡಿಕಲ್ ಸೆಂಟರ್ಲಾಸ್ ವೆಗಾಸ್ ಸ್ಟ್ರಿಪ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


