ಫೇಸ್ ಬುಕ್ ನಲ್ಲಿ ತಪ್ಪು ಪೋಸ್ಟ್: ಮಹಿಳೆಗೆ $500,000 ದಂಡ
ಫೇಸ್ ಬುಕ್ ನಲ್ಲಿ ತಪ್ಪು ಆರೋಪ ಮಾಡಿ ಪೋಸ್ಟ್ ಅಪ್ ಡೇಟ್ ಮಾಡಿದ್ದ ಮಹಿಳೆಗೆ $500,000 ದಂಡ ಪಾವತಿಸುವಂತೆ ನಾರ್ತ್ ಕೆರೊಲಿನಾದ ನ್ಯಾಯಾಲಯವೊಂದು ಆದೇಶ ನೀಡಿದೆ.

Published On :
ನ್ಯೂಯಾರ್ಕ್: ಫೇಸ್ ಬುಕ್ ನಲ್ಲಿ ತಪ್ಪು ಆರೋಪ ಮಾಡಿ ಪೋಸ್ಟ್ ಅಪ್ ಡೇಟ್ ಮಾಡಿದ್ದ ಮಹಿಳೆಗೆ $500,000 ದಂಡ ಪಾವತಿಸುವಂತೆ ನಾರ್ತ್ ಕೆರೊಲಿನಾದ ನ್ಯಾಯಾಲಯವೊಂದು ಆದೇಶ ನೀಡಿದೆ.
ಟೆಲಿಗ್ರಾಫ್ ವರದಿಯ ಪ್ರಕಾರ ಜಾಕ್ವೆಲಿನ್ ಹ್ಯಾಮಂಡ್ ಎಂಬ ಮಹಿಳೆ ತನ್ನ ಮಗನನ್ನು ಮಾಜಿ ಸ್ನೇಹಿತೆ ಹತ್ಯೆ ಮಾಡಿದ್ದಾಳೆಂದು ಆರೋಪಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಅಪ್ ಡೇಟ್ ಮಾಡಿದ್ದರು. ಆದರೆ ಇದನ್ನು ಅಲ್ಲಗಳೆದಿದ್ದ ಜಾಕ್ವೆಲಿನ್ ಹ್ಯಾಮಂಡ್ ನ ಸ್ನೇಹಿತೆ ಡಾವ್ಯ್ನೆ ಡೈಲ್, ಜಾಕ್ವೆಲಿನ್ ಹ್ಯಾಮಂಡ್ ಮಗನ ಸಾವಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಜಾಕ್ವೆಲಿನ್ ಹ್ಯಾಮಂಡ್ ವಿರುದ್ಧ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ರೇಡಿಯೋ ಸ್ಟೇಷನ್ ನಲ್ಲಿ ಒಟ್ಟಿಗೆ ಕೆಲಸ ಮಾಡುವ ಪ್ರಸ್ತಾವನೆ ವಿಫಲವಾದಾಗಿನಿಂದ ಜಾಕ್ವೆಲಿನ್ ಹ್ಯಾಮಂಡ್- ಡಾವ್ಯ್ನೆ ಡೈಲ್ ಸ್ನೇಹ ಮುರಿದುಬಿದ್ದಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನಾರ್ತ್ ಕೆರೊಲಿನಾದ ನ್ಯಾಯಾಲಯ ತಪ್ಪು ಆರೋಪ ಮಾಡಿ ಪೋಸ್ಟ್ ಅಪ್ ಡೇಟ್ ಮಾಡಿದ್ದ ಜಾಕ್ವೆಲಿನ್ ಹ್ಯಾಮಂಡ್ ಗೆ ಡಾವ್ಯ್ನೆ ಡೈಲ್ ಗೆ ಪರಿಹಾರವಾಗಿ $250,000 ಹಾಗೂ ದಂಡನೆಯ ಹಾನಿಗಳನ್ನು ತುಂಬಿಕೊಡಲು $250,000 ಸೇರಿ ಒಟ್ಟು $500,000 ನ್ನು ಪಾವತಿಸಬೇಕೆಂದು ತೀರ್ಪು ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


