ಇಸ್ಲಾಂ ವಿರುದ್ಧ ಚೀನಾ ಕಮ್ಯುನಿಷ್ಟ್ ಪಕ್ಷದ ಅಧಿಕಾರಿಗಳ ಕಠಿಣ ನಿಲುವು!
ತನ್ನ ಸಾರ್ವಕಾಲಿಕ ಮಿತ್ರ ರಾಷ್ಟ್ರ ಪಾಕಿಸ್ತನಾದ ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸಲು ಭಾರತಕ್ಕೆ ಪದೇ ಪದೇ ಅಡ್ಡಿಯಾಗುತ್ತಿರುವ ಚೀನಾಗೆ ಭಯೋತ್ಪಾದನೆಯ ಬಿಸಿ ತಟ್ಟುತ್ತಿದೆ.

Published On :
ಬೀಜಿಂಗ್: ತನ್ನ ಸಾರ್ವಕಾಲಿಕ ಮಿತ್ರ ರಾಷ್ಟ್ರ ಪಾಕಿಸ್ತನಾದ ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸಲು ಭಾರತಕ್ಕೆ ಪದೇ ಪದೇ ಅಡ್ಡಿಯಾಗುತ್ತಿರುವ ಚೀನಾಗೆ ಭಯೋತ್ಪಾದನೆಯ ಬಿಸಿ ತಟ್ಟುತ್ತಿದ್ದು, ಕಠಿಣ ನಿಲುವು ತೆಗೆದುಕೊಳ್ಳುವುದಕ್ಕೆ ಪ್ರಾರಂಭಿಸಿದೆ.
ಚೀನಾದಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಸಿರಿಯಾ, ಇರಾಕ್ ನಲ್ಲಿರುವ ಉಗ್ರರಿಗೆ ಬೆಂಬಲಿಸುತ್ತಿರುವ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಚೀನಾದ ಕಮ್ಯುನಿಷ್ಟ್ ಪಕ್ಷದ ಅಧಿಕಾರಿಗಳು ತೀವ್ರವಾದಿ ಇಸ್ಲಾಂ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ. ಮುಸ್ಲಿಮರು ಹೆಚ್ಚಿರುವ ಪ್ರಾಂತ್ಯದ ಕ್ಸಿನ್ಜಿಯಾಂಗ್ ಪ್ರದೇಶದ ಅಧಿಕಾರಿ ಜನರ ಯುದ್ಧ ಹಾಗೂ ಅಂತಾರಾಷ್ಟ್ರೀಯ ಭಯೋತ್ಪಾದಕ ಸ್ಥಿತಿಯಿಂದ ಚೀನಾ ಅಸ್ಥಿರವಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚೀನಾದಲ್ಲಿಯೂ ಇಸ್ಲಾಮಿಕ್ ಪ್ರತ್ಯೇಕತಾವಾದಿಗಳಿದ್ದು, ಅವರುಗಳನ್ನು ಸಿನೊಗೆ ಮಾರ್ಪಡಿಕೆ (ಚೀನಾ ಸಂಸ್ಕೃತಿಗೆ) ಮಾರ್ಪಾಡು ಮಾಡಬೇಕೆಂದು ಚೀನಾ ಅಧ್ಯಕ್ಷ ಕ್ಸೀ ಜಿಗ್ ಪಿಂಗ್ ಪಕ್ಷಕ್ಕೆ ಸೂಚನೆ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಜಾಗತಿಕ ಜಿಹಾದಿ ಸಂಘಟನೆಯ ಜಾಲಗಳು ಚೀನಾದೊಳಗೂ ನುಸುಳಿರುವ ಸಾಧ್ಯತೆ ಇದೆ ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಅಧಿಕಾರಿಗಳೂ ಸಹ ಇದೇ ರೀತಿಯ ಆತಂಕ ವ್ಯಕ್ತಪಡಿಸಿದ್ದು ಜಾಗತಿಕ ಮಟ್ಟದ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಬೇಕೆಂಬ ಅಭಿಪ್ರಾಯ ಚೀನಾದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಈ ಬಗ್ಗೆ ನಿಂಗ್ಸಿಯಾದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದು, ಇಸ್ಲಾಮಿಕ್ ಸ್ಟೇಟ್ ಹಾಗೂ ತೀವ್ರವಾದಿ ಇಸ್ಲಾಮಿಕ್ ಸಮುದಾಯ ಜಿಹಾದ್ ಹಾಗೂ ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆ. ಆದ್ದರಿಂದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ನೀತಿಯಲ್ಲಿ ಮುಸ್ಲಿಮರನ್ನು ಅಮೆರಿಕ ಪ್ರವೇಶಿಸದಂತೆ ನಿಷೇಧಿಸುತ್ತಿದ್ದಾರೆ. ಮುಸ್ಲಿಂ ವಿರೋಧಿ ನೀತಿಗಳು ಅಮೆರಿಕಾ ಹಿತಾಸಕ್ತಿಗೆ ಅನುಗುಣವಾಗಿದೆಯೋ ಅಥವಾ ತೀವ್ರವಾದಿಗಳು ಅಮೆರಿಕ ಸಂಸ್ಕೃತಿಯನ್ನು ಪ್ರವೇಶಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆಯೋ ಎಂಬುದು ಪ್ರಮುಖವಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ತನಗೆ ಮುಳುವಾಗಿರುವ ಪಾಕಿಸ್ತಾನದ ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವಂತೆ ವಿಶ್ವಸಂಸ್ಥೆ ಕದ ತಟ್ಟಿದಾಗಲೆಲ್ಲಾ ಅಡ್ಡಿಯಾಗುವ ಚೀನಾ ತನ್ನ ಸಾರ್ವಭೌಮತೆ, ತನ್ನ ನೆಲದ ರಕ್ಷಣೆಯ ವಿಷಯ ಎದುರಾದಾಗ ಜಾಗತಿಕ ಭಯೋತ್ಪಾದನೆಯನ್ನು ಹತ್ತಿಕ್ಕುವ, ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಮಾತ್ರ ಕಠಿಣ ನಿಲುವು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


