ವಿದೇಶ

ಭಯೋತ್ಪಾದಕರನ್ನು ಸೃಷ್ಟಿಸಿದ ಪಾಕಿಸ್ತಾನಕ್ಕೆ ಈಗ ಅವರೇ ಕಂಟಕ: ಭಾರತ

ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದಕ ಶಕ್ತಿಗಳನ್ನು ಸೃಷ್ಟಿಸಿದ್ದು, ಇದೀಗ ಆ ಭಯೋತ್ಪಾದಕ ಗುಂಪು...

ಭಯೋತ್ಪಾದಕರನ್ನು ಸೃಷ್ಟಿಸಿದ ಪಾಕಿಸ್ತಾನಕ್ಕೆ ಈಗ ಅವರೇ ಕಂಟಕ: ಭಾರತ
ಸಾಂದರ್ಭಿಕ ಚಿತ್ರ
Published On :
ಜಿನಿವಾ: ಪಾಕಿಸ್ತಾನ, ಭಾರತದ ವಿರುದ್ಧ ಭಯೋತ್ಪಾದಕ ಗುಂಪುಗಳನ್ನು ಸೃಷ್ಟಿಸಿದ್ದು, ಇದೀಗ ಆ ಭಯೋತ್ಪಾದಕ ಗುಂಪು ಎಂಬ ರಾಕ್ಷಸ ತನ್ನ ಸೃಷ್ಟಿಕರ್ತನನ್ನೇ ಕಬಳಿಸಲು ಹೊರಟಿದೆ ಎಂದು ವಿಶ್ವಸಂಸ್ಥೆಯ ಭಾರತದ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿ ಅಜಿತ್ ಕುಮಾರ್ ಹೇಳಿದ್ದಾರೆ.
ಜಿನಿವಾದಲ್ಲಿ ಇಂದು ಅವರು ಮಾನವ ಹಕ್ಕು ಮಂಡಳಿಯ 34ನೇ ಸಭೆಯನ್ನುದ್ದೇಶಿಸಿ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಗಡಿ ಭಯೋತ್ಪಾದನೆಗೆ, ಹಿಂಸೆಗೆ ಕುಮ್ಮಕ್ಕು ನೀಡಿ ಅದನ್ನು ವೈಭವೀಕರಿಸಿ ಪರಿಸ್ಥಿತಿಯನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವ ದೇಶದ ಗೌರವವನ್ನು ಹಾಳು ಮಾಡಲು ಮತ್ತು ಅಲ್ಲಿನ ಮಾನವ ಹಕ್ಕುಗಳನ್ನು ಉಲ್ಲಂಘಿಸಲು ಯಾವ ರೀತಿ ಮುಂದಾಗಿದೆ ಎಂಬುದನ್ನು ಸದಸ್ಯ ರಾಷ್ಟ್ರಗಳು ಗಮನಿಸುತ್ತಿರಬಹುದು ಎಂದರು.
ಭಾರತದ ವಿರುದ್ಧ ಪಾಕಿಸ್ತಾನ ಭಯೋತ್ಪಾದಕ ಗುಂಪುಗಳನ್ನು ಸೃಷ್ಟಿಸಿದೆ. ಇದೀಗ ಆ ರಾಕ್ಷಸ ತನ್ನ ಸೃಷ್ಟಿಕರ್ತನನ್ನೇ ನಾಶ ಮಾಡಲು ಹೊರಟಿರುವುದು ಮಾತ್ರ ದುರಂತ. ಕಳೆದ ಎರಡು ದಶಕಗಳಲ್ಲಿ ವಿಶ್ವದ ಅತ್ಯಂತ ಪ್ರಭಾವಿ ಭಯೋತ್ಪಾದಕ ಗಂಪುಗಳು ಪಾಕಿಸ್ತಾನದಿಂದ  ನೆರವು ಮತ್ತು ಬೆಂಬಲವನ್ನು ಗಳಿಸುತ್ತಿವೆ ಎಂದರು.
ಜಮ್ಮು-ಕಾಶ್ಮೀರದಲ್ಲಿನ ಸಮಸ್ಯೆಗಳಿಗೆ ಮೂಲ ಕಾರಣ ಗಡಿ ಮೂಲಕ ಹಾದು ಬರುವ ಭಯೋತ್ಪಾದಕರು. ಇವರಿಗೆ ಪಾಕಿಸ್ತಾನ ನೆರವು ನೀಡುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಕದಡಲು, ಅಸ್ಥಿರಗೊಳಿಸಲು ಇತ್ತೀಚೆಗೆ ಪಾಕಿಸ್ತಾನ ಶತ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಲ್ಲಿನ ಪರಿಸ್ಥಿತಿ ಭಾರತದ ಆಂತರಿಕ ವಿಷಯವಾಗಿದೆ ಎಂದು ಅಜಿತ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.