ವಿದೇಶ

ಅಲ್ ಬಾಗ್ದಾದಿ ಹತ್ಯೆ ಬಗ್ಗೆ ಮಾಹಿತಿ ಇಲ್ಲ: ಅಮೆರಿಕ

ಅಮೆರಿಕ ಶ್ವೇತ ಭವನ ಪ್ರತಿಕ್ರಿಯೆ ನೀಡಿದ್ದು, ಅಬೂ ಬಕರ್ ಅಲ್ ಬಾಗ್ದಾದಿ ಹತ್ಯೆಯ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಹೇಳಿದೆ.

ಅಲ್ ಬಾಗ್ದಾದಿ ಹತ್ಯೆ ಬಗ್ಗೆ ಮಾಹಿತಿ ಇಲ್ಲ: ಅಮೆರಿಕ
ಅಬೂ ಬಕರ್ ಅಲ್ ಬಾಗ್ದಾದಿ
Published On :
ವಾಷಿಂಗ್ ಟನ್: ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಮುಖಂಡ ಅಬೂ ಬಕರ್ ಅಲ್ ಬಾಗ್ದಾದಿಯನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ರಷ್ಯಾ ಸೇನೆ ಹೇಳಿತ್ತು. ಈ ಬಗ್ಗೆ ಅಮೆರಿಕ ಶ್ವೇತ ಭವನ ಪ್ರತಿಕ್ರಿಯೆ ನೀಡಿದ್ದು, ಅಬೂ ಬಕರ್ ಅಲ್ ಬಾಗ್ದಾದಿ ಹತ್ಯೆಯ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಹೇಳಿದೆ. 
ರಷ್ಯಾ ಸೇನೆ ಅಬೂ ಬಕರ್ ಅಲ್ ಬಾಗ್ದಾದಿಯ ಹತ್ಯೆ ಬಗ್ಗೆ ತನ್ನಲ್ಲಿ ಯಾವುದೇ ಮಾಹಿತಿ ಈ ಕ್ಷಣಕ್ಕೆ ಲಭ್ಯವಿಲ್ಲ ಎಂದು ಶ್ವೇತ ಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸೀಸ್) ಉಗ್ರ ಸಂಘಟನೆಯ ವಿರುದ್ಧ ಅಮೆರಿಕಾ ನೇತೃತ್ವದ ಸೇನೆಯೂ ಹೋರಾಟ ನಡೆಸುತ್ತಿದೆ. ಆದರೆ ರಷ್ಯಾ ಹೇಳಿರುವುದನ್ನು ಬೆಂಬಲಿಸಲು ಅಥವಾ ನಿರಾಕರಿಸುವುದಕ್ಕೆ ಈ ವರೆಗೂ ಪ್ರಾಥಮಿಕ ಮಾಹಿತಿ ಲಭ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ. 
ಇನ್ನು ಇದೇ ವೇಳೆ ಇರಾಕ್ ನ ಅಧಿಕಾರಿಗಳೂ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಷ್ಯಾದ ಹೇಳಿಕೆ ಸಂಶಯಾಸ್ಪದ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.