ಮನೆ ಮಾಲೀಕ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಕರಡಿ, ಫ್ರಿಡ್ಜ್ ನಲ್ಲಿದ್ದ ಆಹಾರ ಬೇಟೆ!
ಮನೆಯ ಮಾಲಿಕ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಕರಡಿಯೊಂದು ಫ್ರಿಡ್ಜ್ ನಲ್ಲಿದ್ದ ಆಹಾರವನ್ನು ಬೇಟೆಯಾಡಿದ ಘಟನೆ ಅಮೆರಿಕಾದ ಕೊಲೊರಾಡೋದಲ್ಲಿ ನಡೆದಿದೆ.

Published On :
ಕೊಲೊರಾಡೋ: ಮನೆಯ ಮಾಲಿಕ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಕರಡಿಯೊಂದು ಫ್ರಿಡ್ಜ್ ನಲ್ಲಿದ್ದ ಆಹಾರವನ್ನು ಬೇಟೆಯಾಡಿದ ಘಟನೆ ಅಮೆರಿಕಾದ ಕೊಲೊರಾಡೋದಲ್ಲಿ ನಡೆದಿದೆ.
ಕೊಲೋರಾಡೊ ಸ್ಪಿಂಗ್ಸ್ ಗೆಜೆಟ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಮನೆಯ ಮಾಲಿಕ ಮಹಡಿಯಲ್ಲಿ ಮಲಗಿರಬೇಕಾದರೆ ಮನೆಯೊಳಗೆ ನುಗ್ಗಿರುವ ಕರಡಿ ಅಡುಗೆ ಕೋಣೆಯಲ್ಲಿ ಸುಮಾರು 6 ಗಂಟೆಗಳಷ್ಟು ಕಾಲ ಇದ್ದು, ಫ್ರಿಡ್ಜ್ ನಲ್ಲಿ ಆಹಾರಕ್ಕಾಗಿ ಹುಡುಕಿದೆ.
ಮನೆಯೊಳಗೆ ನುಗ್ಗಿದ ಕರಡಿ ಫ್ರಿಡ್ಜ್ ಬಾಗಿಲು ತೆರೆದು ಆಹಾರಕ್ಕಾಗಿ ಹುಡುಕುತ್ತಿರುವುದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ನಂತರ ಅಧಿಕಾರಿಗಳು ಕರಡಿಯನ್ನು ಹತ್ಯೆ ಮಾಡಿದ್ದಾರೆ. ಇದೇ ಕರಡಿ ಜೂನ್ ನಲ್ಲಿಯೂ ಮನೆಯೊಂದಕ್ಕೆ ನುಗ್ಗಿ ಐಸ್ ಕ್ರೀಂ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದಿತ್ತು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


