ಮತ್ತೆ ಉಗ್ರ ಮಸೂದ್ ಅಜರ್ ಬೆಂಬಲಕ್ಕೆ ನಿಂತ ಚೀನಾ; ಈ ಬಾರಿ ಅಮೆರಿಕ ಯತ್ನಕ್ಕೆ ಅಡ್ದಗಾಲು
ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.

Published On :
ನವದೆಹಲಿ: ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ಆದರೆ ಈ ಬಾರಿ ಚೀನಾ ಅಡ್ಡಿ ಉಂಟು ಮಾಡಿರುವುದು ಅಮೆರಿಕಾಗದ ಪ್ರಸ್ತಾವನೆಗೆ ಎಂಬುದು ವಿಶೇಷ.
ಭಾರತದ ಪ್ರಸ್ತಾವನೆಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಬೆಂಬಲಿಸಿದ್ದು, ಉಗ್ರ ಮಸೂದ್ ಅಜರ್ ನ್ನು ಜಾಗರಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯ ಮೆಟ್ಟಿಲೇರಿದ್ದ ಅಮೆರಿಕಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಉಗ್ರ ಮಸೂದ್ ಅಜರ್ ನ್ನು ಉಗ್ರರ ಪಟ್ಟಿಗೆ ಸೇರಿಸುವ ಬಗ್ಗೆ ಭಾರತದೊಂದಿಗೆ ಚರ್ಚಿಸಿದ್ದ ನಂತರ ಅಮೆರಿಕ ವಿಶ್ವಸಂಸ್ಥೆ ಮೆಟ್ಟಿಲೇರಿತ್ತು. ಇದಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಆಡಳಿತ ವಿಶ್ವಸಂಸ್ಥೆಗೆ ಮನವಿಯನ್ನೂ ಸಲ್ಲಿಸಿತ್ತು. ಮನವಿಗೆ ಆಕ್ಷೇಪ ಸಲ್ಲಿಸಲು ಅಥವಾ ಮನವಿಯನ್ನು ತಡೆಹಿಡಿಯಲು 10 ದಿನಗಳ ಕಾಲಾವಕಾಶ ಮುಕ್ತಾಯಗೊಳ್ಳುವುದರೊಳಗೆ ಚೀನಾ ಅಮೆರಿಕಾದ ಮನವಿಯನ್ನು ತಡೆಹಿಡಿದಿದೆ.
ಅಮೆರಿಕಾದ ಮನವಿಯನ್ನು ಚೀನಾ ತಡೆಹಿಡಿದಿರುವುದು 6 ತಿಂಗಳು ಮುಂದುವರೆಯಲಿದ್ದು, ಮತ್ತೆ 3 ತಿಂಗಳ ವರೆಗೆ ಅದನ್ನು ವಿಸ್ತರಿಸಬಹುದಾಗಿದೆ. ಈ ಅವಧಿಯಲ್ಲಿ ಚೀನಾ ಸಂಪೂರ್ಣವಾಗಿ ಮನವಿಯನ್ನು ವಿರೋಧಿಸಿದರೆ ಪ್ರಸ್ತಾವನೆ ಅಸ್ತಿತ್ವ ಕಳೆದುಕೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


