ವಿದೇಶ

ಭಾರತದ ಎನ್ ಎಸ್ ಜಿ ಸದಸ್ಯತ್ವ: ತನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದ ಚೀನಾ

ಪರಮಾಣು ಸರಬರಾಜು ಗುಂಪು(ಎನ್ ಎಸ್ ಜಿ) ಸೇರುವ ಭಾರತದ ಪ್ರಯತ್ನಕ್ಕೆ ಚೀನಾ ತನ್ನ ವಿರೋಧವನ್ನು ಮುಂದುವರೆಸಿದ್ದು,....

ಭಾರತದ ಎನ್ ಎಸ್ ಜಿ ಸದಸ್ಯತ್ವ: ತನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದ ಚೀನಾ
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಪ್ರಧಾನಿ ಮೋದಿ
Published On :
ಬೀಜಿಂಗ್: ಪರಮಾಣು ಸರಬರಾಜು ಗುಂಪು(ಎನ್ ಎಸ್ ಜಿ) ಸೇರುವ ಭಾರತದ ಪ್ರಯತ್ನಕ್ಕೆ ಚೀನಾ ತನ್ನ ವಿರೋಧವನ್ನು ಮುಂದುವರೆಸಿದ್ದು, ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗುರುವಾರ ಹೇಳಿದೆ.
ಬೀಜಿಂಗ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜೆನ್‌ ಶುಂಗ್‌ ಅವರು, ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಚೀನಾ ವಿರೋಧ ಮುಂದುವರೆಯಲಿದೆ ಎಂದಿದ್ದಾರೆ.
'ಈ ಸಮಸ್ಯೆಯನ್ನು ನಿಭಾಯಿಸಲು ಚೀನಾ ಪಾರದರ್ಶಕ ಮತ್ತು ನ್ಯಾಯಸಮ್ಮತವಾದ ಅಂತರ ಸರ್ಕಾರಿ ಪ್ರಕ್ರಿಯೆಯ ಮೂಲಕ ಸಮಾಲೋಚನೆ ಮತ್ತು ಒಮ್ಮತದ ನಿರ್ಧಾರದೊಂದಿಗೆ ಎನ್ಎಸ್ ಜಿಗೆ ಬೆಂಬಲ ನೀಡುತ್ತದೆ' ಎಂದು ವರು ಹೇಳಿದ್ದಾರೆ.
48 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಎನ್‌ ಎಸ್‌ಜಿ ವಿಸ್ತರಣೆ ಸಂದರ್ಭ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ(ಎನ್‌ಪಿಟಿ) ಭಾರತ ಸಹಿ ಹಾಕಿಲ್ಲ. ಹೀಗಾಗಿ ಭಾರತಕ್ಕೆ ಎನ್ ಎಸ್ ಜಿ ಸದಸ್ಯ ಬೇಡ ಎಂದು ಚೀನಾ ವಾದಿಸುತ್ತಿದೆ.
ವಿಶ್ವದ ಅಣ್ವಸ್ತ್ರ ಮಾರಾಟವನ್ನು ನಿಯಂತ್ರಿಸುವ ಎನ್ ಎಸ್ ಜಿ ಸದಸ್ಯತ್ವ ನೀಡುವ ಭಾರತದ ಮನವಿಗೆ ಚೈನಾ ಮೊದಲಿನಿಂದಲೂ ಅಡ್ಡಗಾಲು ಹಾಕುತ್ತಾ ಬಂದಿದ್ದು, ಇತ್ತೀಚಿಗಷ್ಟೆ ಎನ್ ಎಸ್ ಜಿ ಯಲ್ಲಿ ಎನ್ ಪಿಟಿ ಒಪ್ಪಿಕೊಳ್ಳದ ಸದ್ಯಸ್ಯರು ಭಾಗವಹಿಸುವುದರ ಬಗ್ಗೆ ಚೀನಾ ನಿಲುವು ಬದಲಾಗಿಲ್ಲ ಎಂದು ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.