ಶ್ವೇತಭವನದಿಂದ ಹೊರನಡೆದ ಟ್ರಂಪ್ ನ ಮುಖ್ಯ ಕಾರ್ಯತಂತ್ರಗಾರ ಸ್ಟೀವ್ ಬ್ಯಾನ್ನನ್
ಡೊನಾಲ್ಡ್ ಟ್ರಂಪ್ನ ಸಂಪುಟದ ವಿವಾದಾತ್ಮಕ ಬಲಪಂಥೀಯ ಮುಖ್ಯ ಸ್ಟೀವ್ ಬನ್ನೊನ್ ಶ್ವೇತಭವನವನ್ನು ತೊರೆದರು.

Published On :
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ನ ಸಂಪುಟದ ವಿವಾದಾತ್ಮಕ ಬಲಪಂಥೀಯ ಮುಖ್ಯ ಸ್ಟೀವ್ ಬನ್ನೊನ್ ಶ್ವೇತಭವನವನ್ನು ತೊರೆದರು.
"ವೈಟ್ ಹೌಸ್ ಮುಖ್ಯಸ್ಥ ಜಾನ್ ಕೆಲ್ಲಿ ಮತ್ತು ಸ್ಟೀವ್ ಬ್ಯಾನ್ನನ್ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ' ನಾವು ಅವರ ಸೇವೆಗೆ ಕೃತಜ್ಞರಾಗಿರುತ್ತೇವೆ ಮತ್ತು ಅವರಿಗೆ ಉತ್ತಮ ಭವಿಷ್ಯವನ್ನು ಹಾರೈಸುತ್ತೇವೆ." ಎಂದು ಟ್ರಂಪ್ನ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ.
ವರ್ಜಿನಿಯಾದಲ್ಲಿನ ಚಾರ್ಲೊಟ್ಟೆಸ್ವಿಲ್ಲೆನಲ್ಲಿನ ನವ-ನಾಜಿಗಳು ಮತ್ತು ಬಿಳಿ ಪ್ರಜಾಪ್ರಭುತ್ವವಾದಿಗಳು ನಡೆಸಿದ ವಾರಾಂತ್ಯದ ರಾಲಿಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ರಿಪಬ್ಲಿಕನ್ ಮತ್ತು ಡೆಮೋಕ್ರಾಟಿಕ್ ಪಕ್ಷಗಳಿಂದ ಬಂದ ಒತ್ತಡ ಹಾಗೂ ಟೀಕೆಗಳಿಂದ ಟ್ರಂಪ್ ಈ ಕ್ರಮಕ್ಕೆ ಮುಂದಾಗಿದ್ದಾರೆ.
63 ವರ್ಷ ವಯಸ್ಸಿನ ಸ್ಟೀವ್ ಅಲ್ಟ್ರಾ ಕನ್ಸರ್ವೇಟಿವ್ ಔಟ್ಲೆಟ್ ಬ್ರೀಟ್ಬಾರ್ಟ್ ನ್ಯೂಸ್ ಮುಖಂಡರಾಗಿದ್ದಾರೆ, ಅವರನ್ನು ಶ್ವೇತವರ್ಣದ ನಾಯಕ ಎಂದು ಕರೆಯಲಾಗುತ್ತಿತ್ತು. ಮತ್ತು ಶ್ವೇತಭವನದಲ್ಲಿ ಅವರ ಉಪಸ್ಥಿತಿಯು ಪ್ರಾರಂಭದಿಂದಲೂೊಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೀದಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


