ವಿದೇಶ

ಕ್ಸಿನ್ ಜಿಯಾಂಗ್ ನಲ್ಲಿ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ನಿಷೇಧಿಸಿದ ಚೈನಾ

ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ವಾಸಿಸುವ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಮಕ್ಕಳಿಗೆ ಕೆಲವು ಇಸ್ಲಾಮಿಕ್ ಹೆಸರುಗಳನ್ನೂ ಇಡುವುದರಿಂದ ಚೈನಾ ನಿಷೇಧಿಸಿದೆ ಎಂದು ಮಾನವ ಹಕ್ಕುಗಳ ಪರಿವೀಕ್ಷಣಾ

ಕ್ಸಿನ್ ಜಿಯಾಂಗ್ ನಲ್ಲಿ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ನಿಷೇಧಿಸಿದ ಚೈನಾ
ಸಾಂದರ್ಭಿಕ ಚಿತ್ರ
Published On :
ಬೀಜಿಂಗ್: ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ವಾಸಿಸುವ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಮಕ್ಕಳಿಗೆ ಕೆಲವು ಇಸ್ಲಾಮಿಕ್ ಹೆಸರುಗಳನ್ನೂ ಇಡುವುದರಿಂದ ಚೈನಾ ನಿಷೇಧಿಸಿದೆ ಎಂದು ಮಾನವ ಹಕ್ಕುಗಳ ಪರಿವೀಕ್ಷಣಾ ಸಂಸ್ಥೆ (ಎಚ್ ಆರ್ ಡಬ್ಲ್ಯೂ) ಮಂಗಳವಾರ ಹೇಳಿದೆ. 
ಈ ಆದೇಶದ ಪ್ರಕಾರ ಸದ್ದಾಮ್ ಅಥವಾ ಮದೀನಾ ಇಂತಹ ಹೆಸರುಗಳನ್ನು ಮಕ್ಕಳಿಗೆ ಇಡಲು ನಿಷೇಧಿಸಲಾಗಿದ್ದು, ಅಂತಹ ಹೆಸರಿರುವವರಿಗೆ ವಾಸಕ್ಕೆ ಪರವಾನಿಗಿ ನಿಷೇಧಿಸಲಾಗತ್ತದೆ. ಮತ್ತು ಅವರಿಗೆ ವೈದ್ಯಕೀಯ ಮತ್ತು ಶಿಕ್ಷಣ ಸೌಲಭ್ಯಗಳು ಕೂಡ ತಪ್ಪಿಹೋಗಲಿವೆ. 
"ಧಾರ್ಮಿಕ ಪ್ರತಿಗಾಮಿತನ ತಡೆಯುವ ಹೆಸರಿನಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ತಡೆ ಒಡ್ಡುತ್ತಿರುವ ಹಲವು ಆದೇಶಗಳಲ್ಲಿ ಇದು ಒಂದು" ಎಂದು ಎಚ್ ಆರ್ ಡಬ್ಲ್ಯೂ ಹೇಳಿದೆ. 
ಧಾರ್ಮಿಕ ಮನೋಭಾವವನ್ನು ಅತಿರೇಕಕ್ಕೆ ಈ ಹೆಸರುಗಳು ಕೊಂಡೊಯ್ಯುವುದರಿಂದ ಇವುಗಳನ್ನು ನಿಷೇಧಿಸಲಾಗಿದೆ ಎಂದು ಕ್ಸಿನ್ ಜಿಯಾಂಗ್ ಸರ್ಕಾರ ಹೇಳಿದೆ ಎಂದು ಇ ಎಫ್ ಇ ನ್ಯೂಸ್ ವರದಿ ಮಾಡಿದೆ. 
ಏಪ್ರಿಲ್ ೧ ರಂದು ನೀಡಿದ್ದ ಆದೇಶದ ಪ್ರಕಾರ ಕ್ಸಿನ್ ಜಿಯಾಂಗ್ ಸರ್ಕಾರ ಅತಿ ಉದ್ದದ ಗಡ್ಡ ಬೆಳೆಸುವುದಕ್ಕೂ, ಮುಖ ಕಾಣದ ಪೂರ್ಣ ದೇಹವನ್ನು ಮುಚ್ಚುವ ಬಟ್ಟೆಗಳನ್ನು ಧರಿಸುವುದಕ್ಕೂ ನಿಷೇಧ ಹೇರಿತ್ತಲ್ಲದೆ, ಸರ್ಕಾರದ ಟಿವಿ ವಾಹಿಗಳನ್ನು ನೋಡುವುದು, ರೇಡಿಯೋ ಕೇಳುವುದಕ್ಕೆ ನಿರಾಕರಿಸದರೆ ಶಿಕ್ಷೆ ಎದುರಿಸಬೇಕಾಗಬಹುದು ಎಂದಿತ್ತು. 
ಈ ಪ್ರದೇಶದಲ್ಲಿ ಉಯ್ಗರ್ ಮುಸ್ಲಿಮರು ಮತ್ತು ಬಹುಸಂಖ್ಯಾತ ಹ್ಯಾನ್ ಸಮುದಾಯದ ನಡುವೆ ಘರ್ಷಣೆ ಸಾಮಾನ್ಯವಾಗಿದ್ದು, ಬೀಜಿಂಗ್ ಸರ್ಕಾರ ಈ ಘರ್ಷಣೆಗಳಿಗೆ ಉಯ್ಗರ್ ಮುಸ್ಲಿಮರ ಧಾರ್ಮಿಕ ಅತಿರೇಕ ಕಾರಣ ಎಂದು ದೂರುವುದು ಸಾಮಾನ್ಯ.
"ಈ ನಡೆ  ಉಯ್ಗರ್ ಮುಸ್ಲಿಮರ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಲಿದೆ" ಎಂದು ಎಚ್ ಆರ್ ಡಬ್ಲ್ಯೂ ತಿಳಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.