ವಿದೇಶ

ಸೋಮಾಲಿಯ ಸೇನೆಯ ಸಾಹಸ; ಕಡಲ್ಗಳ್ಳರ ವಶದಲ್ಲಿದ್ದ 10 ಭಾರತೀಯರ ರಕ್ಷಣೆ

ಕುಖ್ಯಾತ ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ 10 ಮಂದಿ ಭಾರತೀಯರನ್ನು ಸೋಮಾಲಿಯಾ ಮಿಲಿಟರಿ ಪಡೆ ಸುರಕ್ಷಿತವಾಗಿ ರಕ್ಷಿಸಿ ಭಾರತಕ್ಕೆ ಹಸ್ತಾಂತರಿಸಿದೆ.

ಸೋಮಾಲಿಯ ಸೇನೆಯ ಸಾಹಸ; ಕಡಲ್ಗಳ್ಳರ ವಶದಲ್ಲಿದ್ದ 10 ಭಾರತೀಯರ ರಕ್ಷಣೆ
ಕಡಳ್ಳರ ವಶದಲ್ಲಿದ್ದ ಭಾರತೀಯರನ್ನು ಸೇನೆ ವಶಕ್ಕೆ ನೀಡುತ್ತಿರುವ ಸೊಮಾಲಿಯಾ ಸೇನಾ ಪಡೆ!
Published On :

ಮೊಗದಿಶು: ಕುಖ್ಯಾತ ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ 10 ಮಂದಿ ಭಾರತೀಯರನ್ನು ಸೋಮಾಲಿಯಾ ಮಿಲಿಟರಿ ಪಡೆ ಸುರಕ್ಷಿತವಾಗಿ ರಕ್ಷಿಸಿ ಭಾರತಕ್ಕೆ ಹಸ್ತಾಂತರಿಸಿದೆ.

ಕಳೆದ ವಾರ ಭಾರತೀಯ ಹಡಗಿನ ಇಬ್ಬರು ಅಧಿಕಾರಿಗಳು ಸೇರಿದಂತೆ ಒಟ್ಟು 8 ಮಂದಿ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು. 10 ಮಂದಿಯನ್ನು ಹೈಬೋ ನಗರದ ಹೊರವಲಯದ ಸಣ್ಣ ಗ್ರಾಮದಲ್ಲಿ ಕಡಲ್ಗಳ್ಳರು  ಅಡಗಿಸಿಟ್ಟಿದ್ದು, ಸ್ಥಳೀಯ ಸೋಮಾಲಿಯ ಪಡೆ ಇತ್ತೀಚೆಗೆ ದಾಳಿ ನಡೆಸಿ ಭಾರತೀಯರನ್ನು ರಕ್ಷಿಸಿರುವುದಾಗಿ ನಗರದ ಮೇಯರ್ ಅಬ್ದುಲ್ಲಾಹಿ ಅಹ್ಮದ್ ಅಲಿ ತಿಳಿಸಿದ್ದರು. ಇದೀಗ ಅಪಹೃತ ಭಾರತೀಯರನ್ನು ಭಾರತೀಯ  ನೌಕಾಪಡೆಗೆ ಸೋಮಾಲಿಯಾ ಸೇನೆ ಹಸ್ತಾಂತರಿಸಿದ್ದು, ಎಲ್ಲರೂ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಯಾಚರಣೆ ವೇಳೆ ಸೋಮಾಲಿಯ ಮಿಲಿಟರಿ ಪಡೆ ನಾಲ್ವರು ಕಡಲ್ಗಳ್ಳರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ರಕ್ಷಣಾ ಪಡೆಗಳು ತಮ್ಮನ್ನು ಬೆನ್ನಟ್ಟಿ ಬರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಡಲ್ಗಳ್ಳರು ಅಪಹರಿಸಿದ್ದ  ಸಿಬ್ಬಂದಿಗಳನ್ನು ತುಂಬಾ ದೂರಕ್ಕೆ ಕರೆದೊಯ್ದಿದ್ದರು. ಭಾರತೀಯ ಸಿಬ್ಬಂದಿಗಳು ಆಹಾರ, ನೀರು ಸಿಗದೆ ಹಸಿವಿನಿಂದ ಕಂಗೆಟ್ಟಿದ್ದರು. ಇದೀಗ ಅವರ ಆರೈಕೆ ಮಾಡಿ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಮೇಯರ್ ಮಾಹಿತಿ  ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.