ಗಡಿ ವಿವಾದ ಮರೆತು ಸೊಮಾಲಿಯಾ ಕಡಲ್ಗಳ್ಳರಿಂದ ಸರಕು ಸಾಗಾಣಿಕಾ ಹಡಗು ರಕ್ಷಿಸಿದ ಭಾರತ-ಚೀನಾ ನೌಕಾಪಡೆ!
ಹಿಂಸಾಚಾರ ಪೀಡಿತ ಯೆಮೆನ್ ನಿಂದ ಮಲೇಷ್ಯಾದತ್ತ ಆಗಮಿಸುತ್ತಿದ್ದ ಸರಕು ಸಾಗಾಣಿಕಾ ಹಡಗಿನ ಮೇಲೆ ದಾಳಿ ಮಾಡಿದ್ದ ಸೋಮಾಲಿಯಾ ಕಡಲ್ಗಳ್ಳರನ್ನು ಭಾರತ ಮತ್ತು ಚೀನಾ ನೌಕಾಪಡೆಗಳು ಹಿಮ್ಮೆಟಿಸಿದ ಘಟನೆ ನಡೆದಿದೆ.

ಅಡೆನ್: ಹಿಂಸಾಚಾರ ಪೀಡಿತ ಯೆಮೆನ್ ನಿಂದ ಮಲೇಷ್ಯಾದತ್ತ ಆಗಮಿಸುತ್ತಿದ್ದ ಸರಕು ಸಾಗಾಣಿಕಾ ಹಡಗಿನ ಮೇಲೆ ದಾಳಿ ಮಾಡಿದ್ದ ಸೋಮಾಲಿಯಾ ಕಡಲ್ಗಳ್ಳರನ್ನು ಭಾರತ ಮತ್ತು ಚೀನಾ ನೌಕಾಪಡೆಗಳು ಹಿಮ್ಮೆಟಿಸಿದ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಯೆಮೆನ್ ಅಡೆನ್ ನಿಂದ ಮಲೇಷ್ಯಾದ ಕೆಳಂಗ್ ಬಂದರಿನತ್ತ ಪ್ರಯಾಣ ಬೆಳೆಸುತ್ತಿದ್ದ ದಕ್ಷಿಣ ಫೆಸಿಫಿಕ್ ನ ಟುವಲು ದ್ವೀಪದ ನೋಂದಣಿಯ MVOS35 ಹಡಗನ್ನು ಸೊಮಾಲಿಯಾ ಕಡಲ್ಗಳ್ಳರು ಹಿಂಬಾಲಿಸಿ ದಾಳಿ ಮಾಡಿದ್ದು, ಈ ವಿಚಾರವನ್ನು ತಿಳಿದ ಬ್ರಿಟನ್ ನ ಕಡಲ ವ್ಯಾಪಾರ ಸಂಸ್ಥೆ (Maritime Trade Organisation) ಕೂಡಲೇ ಭಾರತೀಯ ನೌಕಾಪಡೆಗೆ ವಿಚಾರ ತಿಳಿಸಿದೆ. ವಿಚಾರ ತಿಳಿದ ಕೂಡಲೇ ಭಾರತೀಯ ನೌಕಾದಳದ ಐಎನ್ ಎಸ್ ಮುಂಬೈ ಯುದ್ಧ ನೌಕೆ ಮತ್ತು ಐಎನ್ ಎಸ್ ಟರ್ಕಾಶ್ ದೌಡಾಯಿಸಿದ್ದು, ತನ್ನಲ್ಲಿನ ಹೆಲಿಕಾಪ್ಟರ್ ಗಳ ಮುಖಾಂತರ ಹಡಗನ್ನು ಹಿಂಬಾಲಿಸಿತು.
ಬೆಳಗಿನ ಜಾವದವರೆಗೂ ಹಡಗನ್ನು ಹಿಂಬಾಲಿಸಿದ ನೌಕಾಪಡೆ ತಮ್ಮ ಮೇಲೆ ಎಲ್ಲಿ ದಾಳಿ ಮಾಡುತ್ತಾರೆಯೋ ಎಂದು ಶಂಕಿಸಿದ ಕಡಲ್ಗಳ್ಳರು ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅತ್ತ ಕಡಲ್ಗಳ್ಳರು ಪರಾರಿಯಾಗುತ್ತಿದ್ದಂತೆಯೇ ಹಡಗಿನ ಮೇಲೆ ಇಳಿದ ಸೈನಿಕರು ಹಡಗಿನ ಕ್ಯಾಪ್ಟನ್ ಗಾಗಿ ಶೋಧ ನಡೆಸುತ್ತಿದ್ದ ಸಂದರ್ಭದಲ್ಲಿ ಚೀನಾ ನೌಕಾಪಡೆ ಸೈನಿಕರೂ ಕೂಡ ಹಡಗಿನಲ್ಲಿ ಇಳಿದು ಹಡಗಿನ ಕ್ಯಾಪ್ಟನ್ ಅನ್ನು ಸಂಪರ್ಕಿಸಿ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಅತ್ತ ಕಡಲ್ಗಳ್ಳರ ದಾಳಿ ಮುನ್ಸೂಚನೆ ದೊರೆಯುತ್ತಿದ್ದಂತೆಯೇ ಹಡಗಿನಲ್ಲಿದ್ದ ಸಿಬ್ಬಂದಿಗಳೆಲ್ಲಾ ಸ್ಟ್ರಾಂಗ್ ರೂಂಗೆ ತೆರಳಿ ಡೋರ್ ಲಾಕ್ ಮಾಡಿಕೊಂಡಿದ್ದರು. ಭಾರತ ಮತ್ತು ಚೀನಾ ಸೈನಿಕರು ಆಗಮಿಸಿದ ಬಳಿಕವಷ್ಟೇ ಅವರು ಸ್ಟ್ರಾಂಗ್ ರೂಂ ಬಾಗಿಲು ತೆರೆದಿದ್ದಾರೆ.
ಹಡಗಿನಲ್ಲಿ ಸುಮಾರು 21 ಸಾವಿರ ಟನ್ ವಸ್ತುಗಳು ಇತ್ತು ಎಂದು ತಿಳಿದುಬಂದಿದ್ದು, ಈ ವಸ್ತುಗಳನ್ನು ಅಪಹರಿಸಲೆಂದೇ ಕಡಲ್ಗಳ್ಳರು ದಾಳಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಹಡಗನ್ನು ಸಂಪೂರ್ಣ ಸುರಕ್ಷತೆಯೊಂದಿಗೆ ಮಲೇಷ್ಯಾಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಹಡಗಿನಲ್ಲಿದ್ದ ಚೀನಾ ಮೂಲದ ಸಿಬ್ಬಂದಿಯೋರ್ವ ಭಾರತೀಯ ನೌಕಾಪಡೆ ಶೌರ್ಯಕ್ಕೆ ಧನ್ಯವಾದ ತಿಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


