ಕಾಶ್ಮೀರ ಮೂಲಕವೇ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಸಾಧ್ಯ: ಅಮೆರಿಕಾಗೆ ಪಾಕಿಸ್ತಾನ
ಇದೇ ಮೊದಲ ಬಾರಿಗೆ ಕಾಶ್ಮೀರ ವಿಚಾರದಲ್ಲಿ ಅಫ್ಘಾನಿಸ್ತಾನವನ್ನು ಎಳೆದು ತಂದಿರುವ ಪಾಕಿಸ್ತಾನ, ಯುದ್ಧದಿಂದ ಹಾನಿಗೊಳಗಾಗಿರುವ...

Published On :
ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಕಾಶ್ಮೀರ ವಿಚಾರದಲ್ಲಿ ಅಫ್ಘಾನಿಸ್ತಾನವನ್ನು ಎಳೆದು ತಂದಿರುವ ಪಾಕಿಸ್ತಾನ, ಯುದ್ಧದಿಂದ ಹಾನಿಗೊಳಗಾಗಿರುವ ಅಫ್ಘಾನಿಸ್ತಾನದಲ್ಲಿ ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಅಗತ್ಯ ಇದ್ದು, ಇವೆರಡನ್ನು ಪ್ರತ್ಯೇಕಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಾಬುಲ್ ನಲ್ಲಿ ಶಾಂತಿ ಸ್ಥಾಪಿಸುವ ಮಾರ್ಗ ಕಾಶ್ಮೀರದಲ್ಲಿದೆ. ಕಾಬುಲ್ ಮತ್ತು ಕಾಶ್ಮೀರ ಎರಡನ್ನು ಪ್ರತ್ಯೇಕಿಸಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ. ಒಂದು ವೇಳೆ ಎರಡನ್ನೂ ಪ್ರತ್ಯೇಕಿಸಿ ಕಾಬುಲ್ ನಲ್ಲಿ ಶಾಂತಿ ಸ್ಥಾಪಿಸಿದರೆ, ಕಾಶ್ಮೀರ ಹೊತ್ತಿ ಉರಿಯುತ್ತದೆ ಎಂದು ಪಾಕಿಸ್ತಾನ ಪ್ರಧಾನಿಯ ಕಾಶ್ಮೀರ ಕುರಿತ ವಿಶೇಷ ರಾಯಭಾರಿ ಮುಷಾಹಿದ್ ಹುಸೇನ್ ಸಯೀದ್ ಅವರು ಹೇಳಿದ್ದಾರೆ.
ಸಮಗ್ರ ಶಾಂತಿ ಒಪ್ಪಂದದ ಬಗ್ಗೆ ನೀವು ಮಾತನಾಡುವುದಾದರೆ, ದಕ್ಷಿಣ ಏಷ್ಯಾದ ಜನ ದ್ವೇಷದ ಒತ್ತೆಯಾಳುವುದು ಬೇಡ. ಅವರನ್ನು ಬಿಟ್ಟುಬಿಡಿ ಎಂದು ಸಯೀದ್ ಅವರು ಅಮೆರಿಕಾಗೆ ಹೇಳಿದ್ದಾರೆ.
ಈ ಬಾರಿ ನಮ್ಮ ಪ್ರಮುಖ ವಿಷಯ ಕಾಶ್ಮೀರ ಮತ್ತು ಈ ಪ್ರದೇಶದಲ್ಲಿ ಶಾಂತಿಗೆ ಗೆಲುವು ಸಿಗುತ್ತಿಲ್ಲ. ಇದು ಆಂತರಿಕ ಸಮಸ್ಯೆ ಅಲ್ಲ. ಇದೊಂದು ಅಂತಾರಾಷ್ಟ್ರೀಯ ವಿಷಯವಾಗಿದ್ದು, ನಾವು ಪರಮಾಣು ನೆರೆಹೊರೆಯನ್ನು ಹೊಂದಿದ್ದು, ಮೊದಲ ಕಾಶ್ಮೀರ ವಿಷಯ ಇತ್ಯರ್ಥವಾಗಬೇಕಿದೆ. ನಂತರ ಉಳಿದ ವಿವಾದಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಪಾಕಿಸ್ತಾನ ಸಂಸದೆ ಷೆಜ್ರಾ ಮನ್ಸಬ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


