ಅಮೆರಿಕ ಚುನಾವಣೆ 2016: ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿಗೆ ಗೆಲುವು
ಶಿಕಾಗೋ ಉಪನಗರದಿಂದ ಚುನಾವಣಾ ಕಣಕ್ಕಿಳಿದಿದ್ದ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿಯವರಿಗೆ ಗೆಲುವು ದೊರಕಿರುವುದಾಗಿ ಬುಧವಾರ ತಿಳಿದುಬಂದಿದೆ...

ವಾಷಿಂಗ್ಟನ್: ಶಿಕಾಗೋ ಉಪನಗರದಿಂದ ಚುನಾವಣಾ ಕಣಕ್ಕಿಳಿದಿದ್ದ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿಯವರಿಗೆ ಗೆಲುವು ದೊರಕಿರುವುದಾಗಿ ಬುಧವಾರ ತಿಳಿದುಬಂದಿದೆ.
ಇನಿನಾಯ್ ಜಿಲ್ಲೆಯಿಂದ ಅಮೆರಿಕದ ಕಾಂಗ್ರೆಸ್ ನ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿಯವರು ಚುನಾವಣಾ ಅಖಾಡಕ್ಕಿಳಿದಿದ್ದರು. ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಪೀಟರ್ ಡಿಶಿಯಾನ್ನಿ ಅವರ ವಿರುದ್ಧ ಕೃಷ್ಣಮೂರ್ತಿಯವರು ಗೆಲವು ಸಾಧಿಸಿದ್ದಾರೆ.
ಕೃಷ್ಣಮೂರ್ತಿಯವರು ಮೂಲತಃ ಚೆನ್ನೈ ಮೂಲದವರಾಗಿದ್ದು, ನವದೆಹಲಿ ಇವರ ಹುಟ್ಟೂರಾಗಿದೆ. ಪ್ರಸ್ತುತ ಅಮೆರಿಕ ರಾಷ್ಟ್ರದಲ್ಲೆ ನೆಲೆಯೂರಿರುವ ಭಾರತೀಯ ಪ್ರಜೆಯಾಗಿದ್ದಾರೆ. 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮ ಅವರ ಗೆಲುವಿನಲ್ಲಿ ಕೃಷ್ಣಮೂರ್ತಿಯವರು ಪ್ರಮುಖ ಪಾತ್ರವಹಿಸಿದ್ದ ಅನಿವಾಸಿ ಭಾರತೀಯರಾಗಿದ್ದರು.
ಗೆಲುವು ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕೃಷ್ಣಮೂರ್ತಿಯವರು, ನನ್ನ ಗೆಲುವಿಗೆ ಕಾರಣರಾದ ಎಲ್ಲಾ ಬೆಂಬಲಿಗರಿಗೂ ಈ ಮೂಲಕ ಧನ್ಯವಾದಗಳನ್ನು ಸೂಚಿಸುತ್ತಿದ್ದೇನೆಂದು ಹೇಳಿದ್ದಾರೆ.
ಇನಿನಾಯ್ ಜಿಲ್ಲೆಯಲ್ಲಿ 1950 ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಮೂಲದವರಾಗಿದ್ದ ದಿಲೀಪ್ ಸಿಂಗ್ ಅವರು ಗೆಲವು ಸಾಧಿಸಿದ್ದರು. ಇದಾದ ಬಳಿಕ ಸಾಕಷ್ಟು ಸುಧೀರ್ಘ ವರ್ಷದ ಬಳಿಕ ಮತ್ತೊಮ್ಮೆ ಇದೇ ಕ್ಷೇತ್ರದಲ್ಲಿ ಎರಡನೇ ಭಾರತೀಯರಾಗಿ ಕೃಷ್ಣಮೂರ್ತಿಯವರು ಗೆಲವು ಸಾಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


