ವಿದೇಶ

ರಿಪಬ್ಲಿಕ್ ಭವಿಷ್ಯ ನಿಮ್ಮ ಕೈಯಲ್ಲಿದೆ: ಅಮೆರಿಕ ಮತದಾರರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಮನವಿ

ಅಮೆರಿಕಾದ ಜನರು ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸಿ ಹಿಲರಿ ಕ್ಲಿಂಟನ್ ಅವರನ್ನು ಗೆಲ್ಲಿಸಬೇಕು ಎಂದು...

ರಿಪಬ್ಲಿಕ್ ಭವಿಷ್ಯ ನಿಮ್ಮ ಕೈಯಲ್ಲಿದೆ: ಅಮೆರಿಕ ಮತದಾರರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಮನವಿ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ
Published On :
ನಾರ್ಥ್ ಕೆರೊಲಿನಾ: ಅಮೆರಿಕಾದ ಜನರು ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸಿ ಹಿಲರಿ ಕ್ಲಿಂಟನ್ ಅವರನ್ನು ಗೆಲ್ಲಿಸಬೇಕು ಎಂದು ಒತ್ತಾಯಿಸಿದ ಅಧ್ಯಕ್ಷ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಅವರು ದೇಶದ ಮತ್ತು ವಿಶ್ವದ ನಾಗರಿಕ ಹಕ್ಕುಗಳಿಗೆ ತಡೆಯಾಗಿದ್ದಾರೆ ಎಂದು ದೂರಿದರು.
ಮುಂದಿನ ಮಂಗಳವಾರ ಅಮೆರಿಕಾದ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅಮೆರಿಕಾದ ಮೊದಲ ಕಪ್ಪು ಜನಾಂಗದ ಅಧ್ಯಕ್ಷ ಬರಾಕ್ ಒಬಾಮಾ, ಟ್ರಂಪ್ ಅವರು ಅಧ್ಯಕ್ಷರಾಗಲು ವಿಶೇಷವಾಗಿ ಅನರ್ಹರು ಎಂದು ಹೇಳಿದ್ದಾರೆ.
ರಿಪಬ್ಲಿಕ್ ನ ಭವಿಷ್ಯ ನಿಮ್ಮ ಹೆಗಲಲ್ಲಿದೆ ಎಂದು ಒಬಾಮಾ ಚಾಪೆಲ್ ಹಿಲ್ ನಲ್ಲಿ ಮತದಾರರಿಗೆ ಹೇಳಿದರು. ಅವರು ಈ ಹಿಂದೆ ಗೆದ್ದ ಉತ್ತರ ಕಾರೊಲಿನಾದಲ್ಲಿ 2008ರ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಿಂದ ಗೆದ್ದಿದ್ದ ಒಬಾಮಾ ದಶಕಗಳ ಹಿಂದೆ ಆಫ್ರಿಕನ್ ಅಮೆರಿಕನ್ ಎಂಬ ಕಾರಣಕ್ಕೆ ಜನಾಂಗೀಯ ನಿಂದನೆ ಅನುಭವಿಸಿದ್ದರು. ಅಮೆರಿಕಾ ದೇಶದ ಕೆಲವು ರಾಜ್ಯಗಳಲ್ಲಿ ಆಫ್ರಿಕನ್ ಅಮೆರಿಕನ್ನರಿಗೆ ಮತದಾನದ ಹಕ್ಕು ಸಿಗುತ್ತಿರಲಿಲ್ಲ. 
''ನಾನು ಉತ್ತರ ಕಾರೊಲಿನಾದಲ್ಲಿ 2 ಮತಗಳ ಅಂತರದಲ್ಲಿ ಗೆದ್ದುಕೊಂಡೆ. ನಿಮ್ಮ ಮತ ಲೆಕ್ಕಕ್ಕೆ ಬರುವುದಿಲ್ಲ ಎಂದು ನೀವೇಗೆ ಹೇಳುತ್ತೀರಿ? ಎಂದು ಒಬಾಮಾ ಮತದಾರರಲ್ಲಿ ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.