ವಿದೇಶ

ವಿಶ್ವದ ಅತಿ ಕಟ್ಟುನಿಟ್ಟಿನ ಎಮಿಷನ್ ಮಾನದಂಡ ಹೊಂದಲಿರುವ ಚೀನಾ

ಚೀನಾದ ರಾಜಧಾನಿ ಬೀಜಿಂಗ್ 2017 ರ ಡಿಸೆಂಬರ್ ನಿಂದ ಮಾಲಿನ್ಯ ತಪಾಸಣೆಗೆ ಹೊಸ ಮಾನದಂಡವನ್ನು ಜಾರಿಗೆ ತರಲಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಟ್ಟುನಿಟ್ಟಿನ ಮಾನದಂಡವಾಗಿರಲಿದೆ.

ವಿಶ್ವದ ಅತಿ ಕಟ್ಟುನಿಟ್ಟಿನ ಎಮಿಷನ್ ಮಾನದಂಡ ಹೊಂದಲಿರುವ ಚೀನಾ
ಚೀನಾ
Published On :

ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್ 2017 ರ ಡಿಸೆಂಬರ್ ನಿಂದ ಮಾಲಿನ್ಯ ತಪಾಸಣೆಗೆ ಹೊಸ ಮಾನದಂಡವನ್ನು ಜಾರಿಗೆ ತರಲಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಟ್ಟುನಿಟ್ಟಿನ ಮಾನದಂಡವಾಗಿರಲಿದೆ.
ಬೀಜಿಂಗ್ ನ ಪರಿಸರ ರಕ್ಷಣಾ ಸಂಸ್ಥೆಯ ಪ್ರಕಾರ ಚೀನಾ ಅಳವಡಿಸಿಕೊಳ್ಳಲು ಮುಂದಾಗಿರುವ ಮಾನದಂಡವನ್ನು ವಿಶ್ವದ ಬೇರೆ ಯಾವ ದೇಶಗಳಲ್ಲಿಯೂ ಈ ವರೆಗೂ ಅಳವಡಿಸಿಕೊಳ್ಳಲಾಗಿಲ್ಲವಂತೆ. ಪರಿಸರ ಮಾಲಿನ್ಯವನ್ನು ತಡೆಗಟ್ಟಲು 2004 ರಿಂದಲೂ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಚೀನಾ, ಅದೇ ವರ್ಷದಲ್ಲಿ ಬೀಜಿಂಗ್  II ಗ್ಯಾಸೋಲಿನ್ ಮಾನದಂಡವನ್ನು ಜಾರಿಗೆ ತಂದು 2007 ರಲ್ಲಿ ಸೀಸ ರಹಿತವಾದ ಗ್ಯಾಸೋಲಿನ್ ನನ್ನು ಬಳಕೆ ಮಾಡಲು ಮುಂದಾಗಿತ್ತು,
ನಂತರ 2005 , 2008, 2012 ರಲ್ಲಿ ಬೀಜಿಂಗ್ ಅನುಕ್ರಮವಾಗಿ ಬೀಜಿಂಗ್  III, IV , V ಗ್ಯಾಸೋಲಿನ್ ಸ್ಟ್ಯಾಂಡರ್ಡ್ ನ್ನು ಜಾರಿಗೊಳಿಸಿತ್ತು. ಈಗ ಜಾರಿಗೊಳಿಸಲಾಗುತ್ತಿರುವ ಬೀಜಿಂಗ್ VI ಸ್ಟ್ಯಾಂಡರ್ಡ್,  ವಾಹನಗಳ ಹೈಡ್ರೋ ಕಾರ್ಬನ್ ನ್ನು ಶೇ.5 ಕ್ಕೆ ಇಳಿಸಲಿದ್ದು ಈ ಮಾನದಂಡ ಡಿಸೆಂಬರ್ 2017 ರಿಂದ ಜಾರಿಗೆ ಬರಲಿದೆ.
2022 ರ ವೇಳೆಗೆ ಬೀಜಿಂಗ್ ನ ಎಮಿಷನ್ ಮಾಲಿನ್ಯ ಶೇ.20 ರಿಂದ 30 ರಷ್ಟು ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.