ಬೆತ್ತಲಾಗಿ ಬೋನಿಗೆ ಜಿಗಿದ ಯುವಕ, ಗುಂಡಿಕ್ಕಿ 2 ಸಿಂಹಗಳ ಹತ್ಯೆ
ಬೆತ್ತಲಾಗಿ ಸಿಂಹಗಳ ಬೋನಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸುವುದಕ್ಕಾಗಿ ಮೃಗಾಲಯ ಸಿಬ್ಬಂದಿ ಬೋನಿನಲ್ಲಿದ್ದ...

Published On :
ಸ್ಯಾಂಟಿಯಾಗೊ(ಚಿಲಿ): ಬೆತ್ತಲಾಗಿ ಸಿಂಹಗಳ ಬೋನಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸುವುದಕ್ಕಾಗಿ ಮೃಗಾಲಯ ಸಿಬ್ಬಂದಿ ಬೋನಿನಲ್ಲಿದ್ದ ಎರಡು ಸಿಂಹಗಳನ್ನು ಕೊಂದ ದಾರುಣ ಘಟನೆ ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಲ್ಲಿ ಶನಿವಾರ ನಡೆದಿದೆ.
ಬೋನಿಗೆ ಜೀಗಿದ ಯುವಕ ಸಿಂಹಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಆದರೆ ಆತ್ಮಹತ್ಯೆಗೆ ಯತ್ನಿಸಿ ಎರಡು ಸಿಂಹಗಳನ್ನು ಬಲಿ ಪಡೆದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂದರ್ಶಕರು ಕಿಕ್ಕಿರಿದಿದ್ದ ವೇಳೆಯಲ್ಲಿ 20 ವರ್ಷದ ಯುವಕನೊಬ್ಬ ಇದ್ದಕ್ಕಿದ್ದಂತ ತನ್ನ ಬಟ್ಟೆಗಳನ್ನು ಕಳಚಿ ಸಿಂಹಗಳಿದ್ದ ಬೋನಿನೊಳಕ್ಕೆ ಜಿಗಿದಿದ್ದಾನೆ. ನಗ್ನ ವ್ಯಕ್ತಿ ಬೋನಿನೊಳಗೆ ಬೀಳುತ್ತಲೇ ಸಿಂಹಗಳ ಸಮೂಹ ಆತನ ಮೇಲೆರಗಿ ಕಚ್ಚಿ ಎಳೆದಾಡತೊಡಗಿದವು. ಈ ಭಯಾನಕ ದೃಶ್ಯದಿಂದ ನೆರೆದಿದ್ದವರು ದಿಗ್ಮೂಢರಾದರು.
ಕೂಡಲೇ ಎಚ್ಚೆತ್ತುಕೊಂಡ ಮೃಗಾಲಯ ಸಿಬ್ಬಂದಿ ಸಿಂಹಗಳನ್ನು ತೆಪ್ಪಗಾಗಿಸಲು ಯತ್ನಿಸಿದರು. ಆದರೆ ಅರಿವಳಿಕೆ ತಜ್ಞರ ಅಭಾವವಿದ್ದ ಕಾರಣ ಒಂದು ಸಿಂಹ ಹಾಗೂ ಸಿಂಹಿಣಿಯನ್ನು ಕೊಂದು ಹಾಕಿಲಾಯಿತು ಎಂದು ಸ್ಯಾಂಟಿಯಾಗೊ ಮೆಟ್ರೊಪಾಲಿಟನ್ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಿಂಹಗಳ ಬೋನಿಗೆ ಜಿಗಿದ ವ್ಯಕ್ತಿಯ ಪ್ಯಾಂಟ್ ಜೋಬಿನಲ್ಲಿ ಆತ್ಮಹತ್ಯೆ ಮುನ್ನ ಬರೆದ ಪತ್ರ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


