ವಿದೇಶ

ಮಾಸ್ಕೋದಲ್ಲಿ ೮೪ ಪಾಕಿಸ್ತಾನಿ ನಾಗರಿಕರು ವಶಕ್ಕೆ

ದಾಖಲೆಗಳು ಅಪೂರ್ಣವಾಗಿದ್ದವು ಎಂದು ಕನಿಷ್ಠ ೮೪ ಪಾಕಿಸ್ತಾನಿ ನಾಗರಿಕರನ್ನು ಸುಮಾರ್ ೮ ಘಂಟೆಗಳ ಕಾಲ ಮಾಸ್ಕೋ ವಿಮಾನನಿಲಾಣ್ದಲ್ಲಿ ರಶಿಯಾದ ಅಧಿಕಾರಿಗಳು

ಮಾಸ್ಕೋದಲ್ಲಿ ೮೪ ಪಾಕಿಸ್ತಾನಿ ನಾಗರಿಕರು ವಶಕ್ಕೆ
ಮಾಸ್ಕೋದಲ್ಲಿ ೮೪ ಪಾಕಿಸ್ತಾನಿ ನಾಗರಿಕರು ವಶಕ್ಕೆ
Published On :

ಇಸ್ಲಾಮಾಬಾದ್: ದಾಖಲೆಗಳು ಅಪೂರ್ಣವಾಗಿದ್ದವು ಎಂದು ಕನಿಷ್ಠ ೮೪ ಪಾಕಿಸ್ತಾನಿ ನಾಗರಿಕರನ್ನು ಸುಮಾರ್ ೮ ಘಂಟೆಗಳ ಕಾಲ ಮಾಸ್ಕೋ ವಿಮಾನನಿಲಾಣ್ದಲ್ಲಿ ರಶಿಯಾದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರದರ್ಶನವೊಂದಲ್ಲಿ ಪಾಲ್ಗೊಳ್ಳಲು ೧೫೦ ಜನ ಪಾಕಿಸ್ತಾನಿ ಉದ್ದಿಮೆದಾರರನ್ನು ಖಾಸಗಿ ಸಂಸ್ಥೆಯೊಂದು ರಷ್ಯಾಗೆ ಕರೆದೊಯ್ದಿತ್ತು. ಆದರೆ ಇವರಲ್ಲಿ ೮೪ ಜನರನ್ನು ಯಾವುದೇ ಕಾರಣ ಇಲ್ಲದೆ ವಶದಲಿಟ್ಟುಕೊಂಡಿದ್ದರು ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಯಾವುದೇ ಕಾರಣಗಳಿಲ್ಲದೆ ಒಂದು ಸಣ್ಣ ಕೊಠಡಿಯಲ್ಲಿ ಕೂಡಿಹಾಕಿದ ಜನರ ಗುಂಪಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

"ಅಧಿಕಾರಿಗಳು ಕೆಲವು ಟರ್ಕಿಶ್ ನಾಗರಿಕರನ್ನು ಕೂಡ ವಶಪಡಿಸಿಕೊಂಡಿದ್ದರು, ಆದರೆ ಅವರನ್ನು ನಂತರ ಬಿಟ್ಟಿಬಿಡಲಾಯಿತು" ಎಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತಿಳಿಸುತ್ತಾರೆ.

ಇವರ ಬಿಡುಗಡೆಗೆ ರಷ್ಯಾದ ಅಧಿಕಾರಿಗಳ ಜೊತೆಗೆ ಪಾಕಿಸ್ತಾನ ರಾಯಭಾರ ಕಚೇರಿ ಸಂಧಾನ ನಡೆಸುತ್ತಿದೆ ಎಂದು ರಷ್ಯಾದ ಪಾಕಿಸ್ತಾನ ರಾಯಭಾರಿ ಕ್ವಾಜಿ ಖೈಲುಲ್ಲಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.