ವಿದೇಶ

ಪ್ರವಾಸ ಮೇಲಿನ ನಿಷೇಧ ತೆರವು: ದುಬೈಗೆ ತೆರಳಿದ ಮುಷರಫ್

ತಮ್ಮ ವಿರುದ್ಧ ಹೇರಲಾಗಿದ್ದ ಪ್ರಯಾಣ ನಿಷೇಧವನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ...

ಪ್ರವಾಸ ಮೇಲಿನ ನಿಷೇಧ ತೆರವು: ದುಬೈಗೆ ತೆರಳಿದ ಮುಷರಫ್
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್
Published On :
ಇಸ್ಲಾಮಾಬಾದ್: ತಮ್ಮ ವಿರುದ್ಧ ಹೇರಲಾಗಿದ್ದ ಪ್ರಯಾಣ ನಿಷೇಧವನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದಾರೆ. 
ಇಂದು ಬೆಳಿಗ್ಗೆ 3.55ಕ್ಕೆ ಕರಾಚಿ ವಿಮಾನ ನಿಲ್ದಾಣದಿಂದ ದುಬೈನತ್ತ ಪ್ರಯಾಣ ಬೆಳೆಸಿದ್ದಾರೆ. ತೆರಳುವ ಮುನ್ನ, "ನಾನೊಬ್ಬ ಕಮಾಂಡೋ, ನನ್ನ ತಾಯ್ನಾಡನ್ನು ನಾನು ಪ್ರೀತಿಸುತ್ತೇನೆ. ಕೆಲವು ವಾರ ಅಥವಾ ತಿಂಗಳಲ್ಲೇ ಮತ್ತೆ ವಾಪಾಸ್ಸಾಗುತ್ತೇನೆ" ಎಂದು ತಿಳಿಸಿದ್ದಾರೆ. 
ಎರಡು ವರ್ಷಗಳ ಹಿಂದೆಯೇ ಮುಷರಫ್ ಪ್ರಯಾಣಕ್ಕೆ ಹೇರಲಾಗಿದ್ದ ನಿಷೇಧವನ್ನು ಪಾಕಿಸ್ತಾನದ ಸಿಂಧ್ ಹೈಕೋರ್ಟ್ ತೆರವುಗೊಳಿಸಿತ್ತು. ಆದರೆ, ಇದಕ್ಕೆ ಪಾಕಿಸ್ತಾನ ಸರ್ಕಾರ ವಿರೋಧ ವ್ಯಕ್ತಪಡಿಸಿ, ಅಕ್ರಮವಾಗಿ ತೆರವುಗೊಳಿಸಲಾಗಿದೆ ಎಂದು ಮತ್ತೊಮ್ಮೆ ಪ್ರಕರಣ ದಾಖಲಿಸಿ, ವಿದೇಶ ಪ್ರಯಾಣಕ್ಕೆ ನಿಷೇಧವೆರಿತ್ತು. 
ಅಲ್ಲದೇ, ಮುಷರಫ್ ವಿದೇಶಿ ಪ್ರವಾಸ ಮಾಡಬಹುದು ಎಂದು ಸಿಂಧ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಿಂಧ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದು, ನಿಷೇಧವನ್ನು ತೆರವುಗೊಳಿಸಿತ್ತು. 
2007ರಲ್ಲಿ ಪಾಕಿಸ್ತಾನದ ಸಂಸತ್ತನ್ನು ಅಮಾನತು ಮಾಡಿದ್ದಕ್ಕಾಗಿ ಮುಷರಫ್ ವಿರುದ್ಧ 2013ರಲ್ಲಿ ಪಾಕ್ ಸರ್ಕಾರ ದೇಶದ್ರೋಹ ಪ್ರಕರಣ ದಾಖಲಿಸಿತ್ತು.  ಬಳಿಕ 2014ರ ಏಪ್ರಿಲ್ ನಲ್ಲಿ ಮುಷರಫ್ ಅವರ ವಿದೇಶಿ ಪ್ರಯಾಣದ ಮೇಲೆ ಪಾಕ್ ಸರ್ಕಾರ ನಿರ್ಬಂಧ ಹೇರಿತ್ತು. ಆದರೆ, 2014ರ ಜೂನ್ ನಲ್ಲಿ ಕರಾಚಿಯಲ್ಲಿರುವ ಸಿಂಧ್ ಹೈಕೋರ್ಟ್ ಈ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಿತ್ತು.
1999ರಿಂದ 2008ರವರೆಗೆ ಪಾಕಿಸ್ತಾನದ ಸೇನಾಪಡೆಯ ಅಧ್ಯಕ್ಷ ಮತ್ತು ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಷರಫ್ ಅವರು, 2007ರಲ್ಲಿ ಪಾಕಿಸ್ತಾನದಲ್ಲಿ ನಡೆದ ರಾಜಕೀಯ ಬಿಕ್ಕಟ್ಟಿನಿಂದಾಗಿ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಮುಷರಫ್ ಅವರ ದುರಾಡಳಿತದ ವಿರುದ್ಧ ತಿರುಗಿಬಿದಿದ್ದ ಪ್ರತಿಪಕ್ಷಗಳನ್ನು ಮಣಿಸಲು ಮತ್ತು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಮುಷರಫ್ ಪಾಕಿಸ್ತಾನದಲ್ಲಿ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಇದರಿಂದ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಅಮಾನತುಗೊಂಡು, ಪಾಕಿಸ್ತಾನ ಸೇನೆ ಅಧಿಕಾರವನ್ನು ವಹಿಸಿಕೊಳ್ಳುವಂತಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.