ರಷ್ಯಾಗೆ ಬೇಕಂತೆ ಸೇನೆಯಲ್ಲಿ ಕೆಲಸ ಮಾಡಬಲ್ಲ ರಹಸ್ಯ ಡಾಲ್ಫಿನ್ ಗಳು..!
ವಿಶ್ವದ ಬಲಾಢ್ಯ ಮಿಲಿಟರಿ ಹೊಂದಿರುವ ದೇಶಗಳಲ್ಲಿ ಒಂದಾದ ರಷ್ಯಾ ಸೇನೆ ಇದೀಗ ತನ್ನ ರಹಸ್ಯ ಕಾರ್ಯಾಚರಣೆಗಳಿಗಾಗಿ ಡಾಲ್ಫಿನ್ ಗಳ ಬಳಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ...

ಮಾಸ್ಕೋ: ವಿಶ್ವದ ಬಲಾಢ್ಯ ಮಿಲಿಟರಿ ಹೊಂದಿರುವ ರಷ್ಯಾ ಸೇನೆ ಇದೀಗ ತನ್ನ ರಹಸ್ಯ ಕಾರ್ಯಾಚರಣೆಗಳಿಗಾಗಿ ಡಾಲ್ಫಿನ್ ಗಳ ಬಳಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ರಷ್ಯಾ ಸರ್ಕಾರ ತನ್ನ ನೌಕಪಾಡೆಯಲ್ಲಿ ಕಾರ್ಯ ನಿರ್ವಹಣೆಗಾಗಿ ಐದು ಡಾಲ್ಫಿನ್ ಗಳಿಗಾಗಿ ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ಆನ್ ಲೈನ್ ನಲ್ಲಿ ಜಾಹಿರಾತು ಕೂಡ ನೀಡಿದೆ ಎಂದು ಹೇಳಲಾಗುತ್ತಿದೆ. ರಷ್ಯಾ ಸರ್ಕಾರದ ಟಾಸ್ಸ್ ನ್ಯೂಸ್ ಏಜೆನ್ಸಿ ಈ ಜಾಹಿರಾತನ್ನು ಪ್ರಕಟಿಸಿದೆ ಎಂದು ಹೇಳಲಾಗುತ್ತಿದೆ. ಡಾಲ್ಫಿನ್ ಗಳ ಪೂರೈಕೆಗಾಗಿ ರಷ್ಯಾದ ಕೆಲ ಅಧಿಕಾರಿಗಳು ಈಗಾಗಲೇ ಕೆಲ ಮಧ್ಯವರ್ತಿಗಳನ್ನು ಸಂಪರ್ಕಿಸಿದ್ದು, ಸಮರ್ಥ ಡಾಲ್ಫಿನ್ ಗಳಿಗೆ ತಲಾ 24 ಸಾವಿರ ಡಾಲರ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ರಷ್ಯಾ ಸರ್ಕಾರಕ್ಕೆ ಒಟ್ಟು 5 ಡಾಲ್ಫಿನ್ ಗಳು ಬೇಕಿದ್ದು, ಇದರಲ್ಲಿ ಮೂರು ಗಂಡು ಮತ್ತು 5 ಹೆಣ್ಣು ಡಾಲ್ಫಿನ್ ಗಳು ಬೇಕಂತೆ. ಅಂತೆಯೇ ಡಾಲ್ಫಿನ್ ಗಳ ಆಯ್ಕೆಯಲ್ಲಿಯೂ ರಷ್ಯಾ ಸರ್ಕಾರ ಒಂದಿಷ್ಟು ಷರತ್ತುಗಳನ್ನು ವಿಧಿಸಿದ್ದು, ಅವುಗಳ ಆಧಾರದ ಮೇಲೆ ಡಾಲ್ಫಿನ್ ಗಳನ್ನು ಖರೀದಿ ಮಾಡುವುದಾಗಿ ಹೇಳಿದೆ. ಮೂಗು ಬಾಟಲಿ ಆಕಾರದಲ್ಲಿದ್ದು, ಗಟ್ಟಿ ಮುಟ್ಟಾದ ಹಲ್ಲುಗಳಿರಬೇಕು. ಪ್ರತಿಯೊಂದು ಡಾಲ್ಫಿನ್ ಗಳು 8 ಅಡಿ ಉದ್ದವಿರಬೇಕು ಎಂದು ಹೇಳಿದೆ.
ಒಂದು ವೇಳೆ ಇಂತಹ ಡಾಲ್ಫಿನ್ ಗಳು ದೊರೆತರೆ ಅವುಗಳನ್ನು ನೌಕಾ ಕಾರ್ಯಾಚರಣೆಗೆ ಬಳಕೆ ಮಾಡಲು ರಷ್ಯಾ ಮಿಲಿಟರಿ ಪಡೆ ಆಯೋಜಿಸಿದೆ. ಡಾಲ್ಫಿನ್ ಗಳಿಗೆ ರಷ್ಯಾ ನೌಕಾಪಡೆಯಿಂದ ಉನ್ನತ ಮಟ್ಟದ ತರಬೇತಿ ನೀಡಿ ಬಳಿಕ ಅವುಗಳನ್ನು ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಇನ್ನು ರಷ್ಯಾ ಸರ್ಕಾರದ ಈ ನೂತನ ಜಾಹಿರಾತು ಇದೀಗ ವಿಶ್ವ ಸಮುದಾಯದ ಕುತೂಹಲಕ್ಕೆ ಕಾರಣವಾಗಿದ್ದು, ಈ ಹಿಂದೆ ರಷ್ಯಾ ಸೇನೆ ಮೂಕ ಪ್ರಾಣಿಗಳನ್ನು ತನ್ನ ಶತ್ರು ರಾಷ್ಟ್ರಗಳ ವಿರುದ್ಧ ಬಳಕೆ ಮಾಡಿದ್ದ ಆರೋಪಗಳೂ ಕೇಳಿಬಂದಿದ್ದವು. ರಷ್ಯಾದ ನೌಕಾ ಸೇನೆ ಈ ಹಿಂದೆ ಹಲವು ಡಾಲ್ಫಿನ್ ಗಳನ್ನು ತನ್ನ ರಹಸ್ಯ ಏಜೆಂಟರಂತೆ ಬಳಕೆ ಮಾಡಿಕೊಂಡಿತ್ತು. ಅಲ್ಲದೆ ಶತ್ರುಪಾಳಯದ ನೌಕೆಗಳ ಮೇಲೆ ಆತ್ಮಹತ್ಯಾ ಬಾಂಬರ್ ಗಳಾಗಿ ಬಳಕೆ ಮಾಡಿದ್ದ ಕುರಿತು ಕೂಡ ಆರೋಪಗಳು ಕೇಳಿಬಂದಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


