ಹ್ಯಾರಿಪಾಟರ್ ಖ್ಯಾತಿಯ ನಟ ಅಲನ್ ರಿಕ್‍ಮನ್ ನಿಧನ
ಹ್ಯಾರಿಪಾಟರ್, ಡೈಹಾರ್ಡ್, ಸೆನ್ಸ್ ಅಂಡ್ ಸೆನ್ಸಿಬಿಲಿಟಿಯಂತಹ ಸಿನಿಮಾಗಳ ಮೂಲಕ ಭಾರತ ಸೇರಿ ಜಗತ್ತಿ ನಾದ್ಯಂತ...

Published On :
ಲಂಡನ್: ಹ್ಯಾರಿಪಾಟರ್, ಡೈಹಾರ್ಡ್, ಸೆನ್ಸ್ ಅಂಡ್ ಸೆನ್ಸಿಬಿಲಿಟಿಯಂತಹ ಸಿನಿಮಾಗಳ ಮೂಲಕ ಭಾರತ ಸೇರಿ ಜಗತ್ತಿ ನಾದ್ಯಂತ ಸಿನಿಮಾಪ್ರಿಯರ ಮನಗೆದ್ದಿದ್ದ ಬ್ರಿಟಿಷ್ ನಟ ಅಲನ್ ರಿಕ್‍ಮನ್ ನಿಧನರಾಗಿದ್ದಾರೆ.
ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 69 ವರ್ಷದ ಹಿರಿಯ ನಟ ಕಳೆದ ಮೂವತ್ತು ವರ್ಷಗಳಿಂದ ಹಾಲಿವುಡ್ ಸಿನಿಮಾ, ಬ್ರಿಟಿಷ್ ರಂಗಭೂಮಿ, ಟಿವಿ ಧಾರಾವಾಹಿಗಳಲ್ಲಿ ನಟನೆ, ನಿರ್ದೇಶನದ ಮೂಲಕ ಜನಪ್ರಿಯತೆ ಗಳಿಸಿದ್ದರು. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ರಿಕ್‍ಮನ್, ಅತ್ಯಂತ ತಮ್ಮ ಪ್ರೌಢ ಅಭಿನಯವಷ್ಟೇ ಅಲ್ಲದೆ, ಸಭ್ಯ ನಡವಳಿಕೆಗೂ ಹಾಲಿವುಡ್ ನಲ್ಲಿ ಹೆಸರಾಗಿದ್ದರು. ತಮ್ಮ ವಿಶಿಷ್ಟ ಸಂಭಾಷಣಾ ಶೈಲಿ, ಮಾತುಗಾರಿಕೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಅವರಿಗೆ ಹ್ಯಾರಿ ಪಾಟರ್ ಸರಣಿಯ ಪ್ರೊಫೆಸರ್ ಸ್ನಾಪ್ ಪಾತ್ರ ಜನಪ್ರಿಯತೆ ತಂದುಕೊಟ್ಟಿತ್ತು.
1988ರಲ್ಲಿ ತೆರೆಕಂಡ ಡೈ ಹಾರ್ಡ್ ಸಿನಿ ಮಾದ ಹಾನ್ಸ್ ಗ್ರುಬರ್ ಪಾತ್ರ ಅವರಿಗೆ ಮೊದಲ ಬಾರಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿತ್ತು. ಅವರ ಇತ್ತೀಚಿನ ಸಿನಿಮಾ ಗ್ಯಾಂಬಿಟ್, ದ ಬಟ್ಲರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


