ಸಾರ್ಕ್ ಸಮ್ಮೇಳನ: ಭಾರತದ ಪತ್ರಕರ್ತರನ್ನು ಗೆಟ್ ನಿಂದ ಹೊರಗೆ ನಿಲ್ಲಿಸಿದ್ದ ಪಾಕಿಸ್ತಾನ!
ಇಸ್ಲಾಮಾಬಾದ್ ನಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಮ್ಮೇಳನದಲ್ಲಿ ಭಾರತದ ಪತ್ರಕರ್ತರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ.

ನವದೆಹಲಿ: ಇಸ್ಲಾಮಾಬಾದ್ ನಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಮ್ಮೇಳನದಲ್ಲಿ ಭಾರತದ ಪತ್ರಕರ್ತರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ.
ಸಾರ್ಕ್ ಸಮ್ಮೇಳನ ನಡೆಯುತ್ತಿದ್ದ ಸ್ಥಳಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸಿದಾಗ ಅದನ್ನು ವರದಿ ಮಾಡಲು ಪಾಕಿಸ್ತಾನದ ಚಾನೆಲ್ ಗಳೂ ಬಂದಿದ್ದವು, ಅಂತೆಯೇ ಭಾರತದ ಪತ್ರಕರ್ತರೂ ಸಹ ರಾಜನಾಥ್ ಸಿಂಗ್ ಆಗಮನವನ್ನು ವರದಿ ಮಾಡಲು ಮುಂದಾದರು. ಆದರೆ ಇದಕ್ಕೆ ಅಡ್ಡಿ ಪಡಿಸಿದ ಪಾಕಿಸ್ತಾನದ ಸಚಿವ ಚೌಧರಿ ನಾಸಿರ್, ಭಾರತದ ಪತ್ರಕರ್ತರು ಕಾರ್ಯಕ್ರಮದ ವರದಿ ಮಾಡುವುದಕ್ಕೆ ಅಡ್ಡಿ ಪಡಿಸಿದ್ದೂ ಅಲ್ಲದೆ, ಪತ್ರಕರ್ತರನ್ನು ಗೆಟ್ ನಿಂದ ಆಚೆ ಕಳಿಸಿರುವ ಘಟನೆ ಈಗ ಬಹಿರಂಗವಾಗಿದೆ.
ದೂರದರ್ಶನದ ಛಾಯಾಗ್ರಾಹಕ ಆರ್ ಜಯಶ್ರೀ ಪುರಿ, ಎಎನ್ ಐ ನ ಅಜಯ್ ಕುಮಾರ್ ಶರ್ಮಾ ಅವರ ವರದಿಗಾರಿಕೆಗೆ ಅಡ್ಡಿಪಡಿಸಿದ್ದಲ್ಲದೆ, ಪತ್ರಕರ್ತರನ್ನು ಗೇಟ್ ನಿಂದ ಹೊರಗೆ ಕಳಿಸಲಾಯಿತು. ಆದರೆ ಇದನ್ನು ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ವಿರೋಧ ವ್ಯಕ್ತಪಡಿಸಿದರೂ ಸಹ ಪಾಕಿಸ್ತಾನದ ಅಧಿಕಾರಿಗಳು ರಾಯಭಾರಿಯೊಂದಿಗೆ ವಾಗ್ವಾದ ನಡೆಸಿ ಭಾರತದ ಪತ್ರಕರ್ತರನ್ನು ಗೇಟ್ ನಿಂದ ಹೊರಗೆ ಕಳಿಸಲಾಗಿದೆ. ಪರಿಣಾಮವಾಗಿ ರಾಜನಾಥ್ ಸಿಂಗ್ ಭಾಗವಹಿಸಿದ್ದ ಕಾರ್ಯಕ್ರಮದ ವಿಡಿಯೋ ಸೆರೆ ಹಿಡಿಯಲು ಸಾಧ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


