ಅಮೆರಿಕಾ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಹೆಚ್ಚು ಜಾಗತಿಕ ಕಾರ್ಯಸೂಚಿ ಹೊಂದಿದೆ
ಅಮೆರಿಕ ಜಾಗತಿಕ ಕಾರ್ಯಸೂಚಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಹೇಳಿದ್ದಾರೆ.

ನ್ಯೂಯಾರ್ಕ್: ಅಮೆರಿಕ ಜಾಗತಿಕ ಕಾರ್ಯಸೂಚಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಸೇರಿ ಮಾಡಬೇಕಾಗಿರುವ ಕೆಲಸಗಳಿಗಿಂತ ನಾವು ಭಾರತದೊಂದಿಗೆ ಮಾಡಬೇಕಾಗಿರುವ ಹಲವಾರು ಸಂಗತಿಗಳಿವೆ. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಪ್ರಮುಖ 'ವ್ಯವಹಾರಗಳಿವೆ' ಆದರೆ ಜಾಗತಿಕ ಕಾರ್ಯಸೂಚಿಗಳ ವಿಷಯದಲ್ಲಿ ಅಮೆರಿಕ ಭಾರತದೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿದೆ ಎಂದು ಆಶ್ ಕಾರ್ಟರ್ ತಿಳಿಸಿದ್ದಾರೆ.
ವಿದೇಶಾಂಗ ಸಂಬಂಧಗಳ ಪರಿಷತ್ ನಲ್ಲಿ ಭಾರತದೊಂದಿಗೆ ಅಮೆರಿಕ ದ್ವಿಪಕ್ಷೀಯ ಸಂಬಂಧ ಹೆಚ್ಚುತ್ತಿದ್ದು ಇದು ಇಸ್ಲಾಮಾಬಾದ್ ನೊಂದಿಗಿನ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ವೇಳೆಯಲ್ಲಿ ಆಶ್ ಕಾರ್ಟರ್ ಈ ವಿಷಯ ತಿಳಿಸಿದ್ದಾರೆ.
ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತ ಭೆಟಿಯ ಮುನ್ನಾದಿನ ಅಮೇರಿಕಾದ ವಿದೇಶಾಂಗ ಸಂಬಂಧಗಳ ಪರಿಷತ್ ನಲ್ಲಿ ಮಾತನಾಡಿದ್ದಾರೆ. ಪಾಕಿಸ್ತಾನದ ಮತ್ತೊಂದು ಮುಖವಾಗಿ ಭಾರತದೊಂದಿಗೆ, ಭಾರತದ ಮತ್ತೊಂದು ಮುಖವಾಗಿ ಪಾಕಿಸ್ತಾನದೊಂದಿಗೆ ವ್ಯವಹರಿಸುವ ದಿನಗಳು ಹೋಗಿವೆ. ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ ಎಂದಿದ್ದಾರೆ ಆಶ್ ಕಾರ್ಟರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


