ವಿದೇಶ

ಕಸದ ಬುಟ್ಟಿಯಲ್ಲಿದ್ದ ಸೆಕ್ಸ್ ಟಾಯ್ ತಂದಿಟ್ಟ ಪಜೀತಿ

ಕಾಮುಕ ಮಹಾಶಯನೊಬ್ಬ ಮಾಡಿದ ಯಡವಟ್ಟಿನಿಂದ ಅಮ್ಯೂಸ್ ಮೆಂಟ್ ಆರ್ಕೇಡ್ ನಲ್ಲಿ ಬಾಂಬ್ ಇದೆಯೆಂದು ಊಹಿಸಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ...

ಕಸದ ಬುಟ್ಟಿಯಲ್ಲಿದ್ದ ಸೆಕ್ಸ್ ಟಾಯ್ ತಂದಿಟ್ಟ ಪಜೀತಿ
ಸಾದರ್ಭಿಕ ಚಿತ್ರ
Published On :

ಬರ್ಲಿನ್: ಕಾಮುಕ ಮಹಾಶಯನೊಬ್ಬ ಮಾಡಿದ ಯಡವಟ್ಟಿನಿಂದ ಅಮ್ಯೂಸ್ ಮೆಂಟ್ ಆರ್ಕೇಡ್ ನಲ್ಲಿ ಬಾಂಬ್ ಇದೆಯೆಂದು ಊಹಿಸಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಜರ್ಮನಿಯ ಬರ್ಲಿನ್ ನಲ್ಲಿ ನಡೆದಿದೆ.

ಪುರುಷರ ಶೌಚಾಲಯದ ಕಸದ ಬುಟ್ಟಿಯಲ್ಲಿ ಬರುತ್ತಿದ್ದ ಶಬ್ದದಿಂದಾಗಿ ಹೆದರಿದ ಮಹಿಳೆ ಟೈಮ್ ಬಾಂಬ್ ಇರಬಹುದು ಎಂದು ಊಹಿಸಿ ಪೊಲೀಸರಿಗೆ ಕರೆ ಮಾಡಿದ್ದಾಳೆ.

ಪೊಲೀಸರೋ ಬಾಂಬ್ ನಿಷ್ಕ್ರಿಯ ದಳದ ಜತೆಗೆ ಬಂದೇ ಬಿಟ್ಟರು. ಅದು ಜರ್ಮನಿಯ ಹಾಲ್ಬೆರ್‌ಸ್ಡ್ಯಾಟ್ ನಗರದ ಅಮ್ಯೂಸ್‌ಮೆಂಟ್ ಆರ್ಕೆಡ್ ನಲ್ಲಿ  ನೆರೆದಿದ್ದ 90ಕ್ಕೂ ಹೆಚ್ಚು ಜನರನ್ನು ತೆರವುಗೊಳಿಸಿ ಎಲ್ಲೆಡೆ ಬ್ಯಾರಿಕೇಡ್ ಹಾಕಿ ಗಂಟೆಗಟ್ಟಲೇ ತಪಾಸಣೆ ನಡೆಸಿದರು. ಕೊನೆಗೆ ಕಸದ ಬುಟ್ಟಿಯಲ್ಲಿ ಸಿಕ್ಕಿದ್ದು ಸೆಕ್ಸ್‌ ಟಾಯ್!

ಯಾರೋ ಬ್ಯಾಟರಿ ಚಾಲಿತ ಈ ಎಲೆಕ್ಟ್ರಾನಿಕ್ ಟಾಯ್ ಅನ್ನು ಡಸ್ಟ್ ಬಿನ್  ನಲ್ಲಿ ಹಾಕಿದ್ದರು. ಅದು ಒಂದೇ ಸಮನೇ ಸದ್ದು ಮಾಡುತ್ತಿತ್ತು. ಕೊನೆಗೆ ಇದನ್ನು ಪತ್ತೆ ಹಚ್ಚಿದ ಬಾಂಬ್ ನಿಷ್ಕ್ರಿಯ ದಳದವರು ನಿಟ್ಟಿಸಿರು ಬಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.