ವಿದೇಶ

ಕೆಲಸ ಮಾಡದವರಿಗೆ ವಜಾ ಶಿಕ್ಷೆ

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಮೈಗಳ್ಳತ ನ ಎಂಬುದು ಕೇವಲ ಭಾರತಕ್ಕೆ ಸೀಮಿತವಲ್ಲ. ಅದಕ್ಕೆ ಕಠಿಣ ಕಾನೂನು...

ಕೆಲಸ ಮಾಡದವರಿಗೆ ವಜಾ ಶಿಕ್ಷೆ
ಸಂಗ್ರಹ ಚಿತ್ರ
Published On :

ಬೀಜಿಂಗ್: ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಮೈಗಳ್ಳತ ನ ಎಂಬುದು ಕೇವಲ ಭಾರತಕ್ಕೆ ಸೀಮಿತವಲ್ಲ. ಅದಕ್ಕೆ ಕಠಿಣ ಕಾನೂನು ಹೊಂದಿರುವ ದೇಶಗಳೆಂದು ಗುರುತಿಸಿಕೊಂಡಿರುವ ಚೀನಾ ಥರದ ದೇಶಗಳೂ ಹೊರತಲ್ಲ ಅನ್ನೋದಕ್ಕೆ ಇಲ್ಲೊಂದು ನಿದರ್ಶನ ಒದಗಿದೆ.

ಚೀನಾದಲ್ಲಿ ಸರ್ಕಾರಿ ಕಚೇರಿಯ ಮೈಗಳ್ಳರಿಗೆ ತಕ್ಕ ಶಿಕ್ಷೆಯಾಗಿದೆ. ಸರ್ಕಾರಿ ಯೋಜನೆಗಳಿಗಾಗಿ ಮೀಸಲಿದ್ದ ಹಣವನ್ನು ಬಳಸದೆಯೇ, ಯೋಜನೆಯನ್ನೂ ಅನುಷ್ಠಾನಕ್ಕೆ ತರದೇ ಪುಕ್ಕಟೆ ಸಂಬಳ ತೆಗೆದು-ಕೊಳ್ಳುತ್ತಿದ್ದ ಒಟ್ಟು 249 ಅಧಿಕಾರಿಗಳಲ್ಲಿ ಕೆಲವರಿಗೆ ಹಿಂಬಡ್ತಿಯ ಶಿಕ್ಷೆ ನೀಡಿದ್ದರೆ, ಇನ್ನು ಕೆಲವರನ್ನು ವೃತ್ತಿಯಿಂದಲೇ ವಜಾಗೊಳಿಸಿದೆ.

ದೇಶದಲ್ಲಿ ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ ಕಳೆದ ಒಂದೂವರೆ ವರ್ಷದಲ್ಲಿ ಕಂಡುಬಂದಿದ್ದು, 18 ತಿಂಗ ಳಿಂದ ಹಲವು ಬೃಹತ್ ಯೋಜನೆಗಳು ಅನು-ಮೋದನೆ ಸಿಗದೆ ನೆನೆಗುದಿಯಲ್ಲಿಯೇಬಿದ್ದಿವೆ. ಸ್ಥಳೀಯ ಸಂಸ್ಥೆಗಳ ಸೋಮಾರಿತನ ಮತ್ತು ಕಾರ್ಯಗತವಾಗದ ಯೋಜನೆಗಳ ಬಗ್ಗೆ ಸರ್ಕಾರ ಅಸಮಾಧಾನಗೊಂಡು ಈ ಮೊದಲು ಎಚ್ಚರಿಕೆ ನೀಡಿಯೂ ಆಗಿತ್ತು.

ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಮೇಲೆ ಸರ್ಕಾರ ಅನಿವಾರ್ಯವಾಗಿ ಕಠಿಣ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕ್ಸಿನ್ ಹುವಾ ಪತ್ರಿಕೆ ವರದಿ ಪ್ರಕಟಿಸಿದೆ.

ಆಹಾರ ಮರುಬಳಕೆ ಯೋಜನೆಗಾಗಿ 2012ರಲ್ಲಿಯೇ ಸರ್ಕಾರ ಹಣ ಮಂಜೂರು ಮಾಡಿದ್ದರೂ ಅಧಿಕಾರಿಗಳು ಹಣವನ್ನೂ ಮುಟ್ಟದೆ, ಯೋಜನೆಗೂ ಚಾಲನೆ ನೀಡದೇ ಕಾಲಕಳೆಯುತ್ತಿದ್ದುದನ್ನು ಈ ಪತ್ರಿಕೆ ವರದಿ ಮಾಡಿತ್ತು. ಪತ್ರಿಕೆಯ ತನಿಖಾ ವರದಿಯ ಪ್ರಕಾರ ಸರ್ಕಾರದಿಂದ ಮಂಜೂರಾಗಿದ್ದ ಸುಮಾರು ಮೂರು ಲಕ್ಷ ಕೋಟಿ ರುಪಾಯಿ ಇದೀಗ ವಾಪಸ್ಸಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.