ಭಾರತ-ಪಾಕ್ ಮಧ್ಯೆ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿಲ್ಲ: ಎಂಇಎ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ...

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಸ್ ಷರೀಫ್ ಅವರ ಮಧ್ಯೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಲ್ಲಿ ಉದ್ದೇಶಪೂರ್ವಕ ಪ್ರಯತ್ನ ನಿಗದಿಯಾಗಿಲ್ಲ. ದ್ವಿಪಕ್ಷೀಯ ಮಾತುಕತೆ ನಡೆದರೆ ನಡೆಯಲಿ ಎಂದು ವಿದೇಶಾಂಗ ಇಲಾಖೆಯ ಅಧಿಕೃತ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ನ್ಯೂಯಾರ್ಕ್ ಗೆ ಕಳೆದ ವಾರ ತಲುಪಿರುವ ಪ್ರಧಾನಿ ಮೋದಿ ಇಲ್ಲಿನ ವಾಲ್ಡೋರ್ಫ್ ಅಸ್ಟೊರಿಯಾ ಹೊಟೇಲ್ ನಲ್ಲಿ ಉಳಿದುಕೊಂಡಿದ್ದಾರೆ. ನಾಳೆ ಸಂಜೆ ನ್ಯೂಯಾರ್ಕ್ ಗೆ ಬಂದು ತಲುಪಲಿರುವ ಪಾಕ್ ಪ್ರಧಾನಿ ಕೂಡ ಅದೇ ಹೊಟೇಲ್ ನಲ್ಲಿ ಉಳಿದುಕೊಳ್ಳಲಿದ್ದಾರೆ.
ಪ್ರತಿಭಟನೆ ಹಿಂತೆಗೆದುಕೊಂಡ ಪಟೇಲರು: ತಮ್ಮ ಐದು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ನ್ಯೂಯಾರ್ಕ್ ಗೆ ಬಂದಿಳಿದಾಗ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಪಟೇಲ್ ಸಮುದಾಯದವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. ತಾವು ಭಾರತದ ಪ್ರಧಾನಿ ಮೋದಿಯವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಧಾನಿಯವರ ಅಮೆರಿಕ ಭೇಟಿಯ ಪ್ರಮುಖ ಬೆಳವಣಿಗೆಗಳು:
1. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಸ್ತವ್ಯ ಹೂಡಿರುವ ಅಮೆರಿಕದ ನ್ಯೂಯಾರ್ಕ್ ನ ವಾಲ್ಡೋರ್ಫ್ ಅಸ್ಟೋರಿಯಾ ಹೊಟೇಲ್ ನ ಹೊರಗಡೆ ಗುಜರಾತ್ ನಲ್ಲಿ ಹಾರ್ದಿಕ್ ಪಟೇಲ್ ನ್ನು ಬೆಂಬಲಿಸುತ್ತಿರುವವರು ಪ್ರತಿಭಟನೆ ನಡೆಸಲು ಚಿಂತಿಸಿದ್ದರು. ಆದರೆ ಮೋದಿಯವರನ್ನು ಬೆಂಬಲಿಸುತ್ತಿರುವವರು ನಡೆಸಿದ ಸಂಧಾನದಿಂದ ಪ್ರತಿಭಟನೆ ಹಿಂಪಡೆಯಲಾಯಿತು.
2. ಪ್ರಧಾನಿ ಮೋದಿಯವರು ಅಮೆರಿಕದಲ್ಲಿ ಪ್ರಮುಖ ಕಂಪೆನಿಗಳ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿ ಭಾರತದಲ್ಲಿ ಹೂಡಿಕೆ ಮಾಡುವಂತೆ ಕೋರಲಿದ್ದಾರೆ.
3. ನಾಡಿದ್ದು ಶನಿವಾರ ವೆಸ್ಟ್ ಕೋಸ್ಟ್ ಗೆ ತೆರಳುವ ಮುನ್ನ ಮೋದಿ ಅವರು ಜರ್ಮನಿ ಪ್ರಧಾನಾಧಿಕಾರಿ ಅಂಜೆಲಾ ಮರ್ಕೆಲ್, ಜಪಾನ್ ಪ್ರಧಾನಿ ಶಿಂಸೋ ಅಬೆ ಮತ್ತು ಬ್ರೆಜಿಲ್ ಅಧ್ಯಕ್ಷ ದಿಲ್ಮಾ ರೌಸೆಫ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


