ವಿದೇಶ

ಭವಿಷ್ಯದ ದೃಷ್ಟಿಯಿಂದ ಭಾರತದೊಂದಿಗೆ ಪಾಕಿಸ್ತಾನದ ಸಂಬಂಧ ಮುಖ್ಯ: ಅಮೆರಿಕ

ಪಾಕಿಸ್ತಾನದ ಭವಿಷ್ಯದ ದೃಷ್ಟಿಯಿಂದ ಭಾರತದೊಂದಿಗೆ ಅದರ ಸಂಬಂಧ ಮುಖ್ಯವಾಗಿದೆ ಎಂದು ಅಮೆರಿಕ ಹೇಳಿದ್ದು, ಎರಡೂ ರಾಷ್ಟ್ರಗಳ...

ಭವಿಷ್ಯದ ದೃಷ್ಟಿಯಿಂದ ಭಾರತದೊಂದಿಗೆ ಪಾಕಿಸ್ತಾನದ ಸಂಬಂಧ ಮುಖ್ಯ: ಅಮೆರಿಕ
ಸಾಂದರ್ಭಿಕ ಚಿತ್ರ
Published On :

ವಾಷಿಂಗ್ಟನ್: ಪಾಕಿಸ್ತಾನದ ಭವಿಷ್ಯದ ದೃಷ್ಟಿಯಿಂದ ಭಾರತದೊಂದಿಗೆ ಅದರ ಸಂಬಂಧ ಮುಖ್ಯವಾಗಿದೆ ಎಂದು ಅಮೆರಿಕ ಹೇಳಿದ್ದು, ಎರಡೂ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ಅಗತ್ಯ ಎಂದು ಸಾರಿದೆ.

ಭಾರತ-ಪಾಕಿಸ್ತಾನ ಮಧ್ಯೆ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಎರಡೂ ದೇಶಗಳ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುವ ಅಗತ್ಯವಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ ಎಂದು ಶ್ವೇತ ಭವನದ ಉಪ ಪತ್ರಿಕಾ ಕಾರ್ಯದರ್ಶಿ ಎರಿಕ್ ಶುಲ್ಜ್ ತಿಳಿಸಿದ್ದಾರೆ.

ನಿನ್ನೆ ಬರಾಕ್ ಒಬಾಮಾ ಮತ್ತು ನವಾಜ್ ಷರೀಫ್ ಅವರ ವಾಷಿಂಗ್ಟನ್ ನಲ್ಲಿ ಮಾತುಕತೆ ಮುಕ್ತಾಯವಾಗಿದ್ದು, ಆ ವೇಳೆ ಒಬಾಮಾ ಅವರು ಕಾಶ್ಮೀರ ವಿವಾದ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಎರಡೂ ದೇಶಗಳು ಬಗೆಹರಿಸಿಕೊಳ್ಳಲು ಇದು ಸರಿಯಾದ ಸಂದರ್ಭ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಅಮೆರಿಕ ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನವನ್ನು ಮಾರಾಟ ಮಾಡಲು ನಿ ರ್ಧರಿಸಿದೆ ಎಂಬ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಯನ್ನು ತಳ್ಳಿ ಹಾಕಿರುವ ಎರಿಕ್ ಶುಲ್ಜ್, ಅಂತಹ ಯಾವುದೇ ನಿರ್ಧಾರ ಅಮೆರಿಕ ತೆಗೆದುಕೊಂಡಿಲ್ಲ. ಭಯೋತ್ಪಾದನೆ ನಿಗ್ರಹಿಸುವಲ್ಲಿ ಅಮೆರಿಕ ಪಾಕಿಸ್ತಾನದ ನೆರವನ್ನು ಬಯಸುತ್ತಿದೆ ಅಷ್ಟೆ ಎಂದು ಹೇಳಿದ್ದಾರೆ.ಈ ಇಬ್ಬರೂ ನಾಯಕರು ಇಂದು ಕೂಡ ಮಾತುಕತೆಯನ್ನು ಮುಂದುವರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.