ದಿನಕ್ಕೆ 12 ಸಾವಿರ ಬಾರಿ ಸೀನು!
ಆ್ಯಕ್ಷೀ...ಆ್ಯಕ್ಷೀ... ಪಕ್ಕದಲ್ಲಿರುವವರು ಒಂದೆರಡು ಬಾರಿ ಸೀನಿದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ, ಇಲ್ಲೊಬ್ಬಳು ದಿನಕ್ಕೆ ಬರೋಬ್ಬರಿ 12 ಸಾವಿರ ಬಾರಿ ಸೀನುತ್ತಾಳಂತೆ! ಅಚ್ಚರಿಯಾದರೂ ಇದು ಸತ್ಯ...

ಆಸ್ಟಿನ್: ಆ್ಯಕ್ಷೀ...ಆ್ಯಕ್ಷೀ... ಪಕ್ಕದಲ್ಲಿರುವವರು ಒಂದೆರಡು ಬಾರಿ ಸೀನಿದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ, ಇಲ್ಲೊಬ್ಬಳು ದಿನಕ್ಕೆ ಬರೋಬ್ಬರಿ 12 ಸಾವಿರ
ಬಾರಿ ಸೀನುತ್ತಾಳಂತೆ! ಅಚ್ಚರಿಯಾದರೂ ಇದು ಸತ್ಯ.
ಟೆಕ್ಸಾಸ್‍ನ 12 ವರ್ಷದ ಬಾಲಕಿ ಕ್ಯಾಟಲಿನ್ ಥಾರ್ನ್ಲೆಗಿರುವ ವಿಚಿತ್ರ ಕಾಯಿಲೆ, ಆಕೆಯ ನೆಮ್ಮ ದಿಯನ್ನು ಕಸಿದುಕೊಂಡಿದೆ. ಈಕೆ ಕಳೆದ ಒಂದು ತಿಂಗಳಿಂದ ನಿಮಿಷಕ್ಕೆ 20 ಬಾರಿಯಂತೆ, ದಿನಕ್ಕೆ 12 ಸಾವಿರ ಸಲ ಸೀನುತ್ತಾಳೆ. ಈಕೆಯ ಸೀನುವಿಕೆಗೆ ಕೊನೆಯೇ ಇಲ್ಲವಂತೆ. ಆರಂಭದಲ್ಲಿ ಕ್ಯಾಟಲಿನ್, ಏನೋ ಅಲರ್ಜಿಯಿಂದ ಸೀನುವಿಕೆ ಶುರುವಾಗಿರಬಹುದು, ಒಂದೆರಡು ದಿನದಲ್ಲಿ ಗುಣವಾಗಬಹುದು ಎಂದೇ ಭಾವಿಸಿದ್ದಳು. ಆದರೆ, ದಿನಕಳೆದಂತೆ ಇದು ಗಂಭೀರ ಸಮಸ್ಯೆಯಾಗಿ ಮಾರ್ಪಾಡಾಯಿತು.
ಪರಿಣಾಮ, ಈ ಬಾಲಕಿಯ ಕಾಲುಗಳು ದುರ್ಬಲವಾಗತೊಡಗಿವೆ, ಕಿಬ್ಬೊಟ್ಟೆ ನೋವು ಶುರುವಾಗಿದೆ. ಈವರೆಗೆ 6 ಮಂದಿ ವೈದ್ಯರನ್ನು ಭೇಟಿಯಾಗಿ, ಚಿಕಿತ್ಸೆ ಪಡೆದರೂ ಸಮಸ್ಯೆ ಪರಿಹಾರವಾಗಿಲ್ಲ. ನಿರಂತರ ಸೀನುವಿಕೆಗೆ ಕಾರಣವೇನು ಎಂಬುದೂ ತಿಳಿದುಬಂದಿಲ್ಲ ಎಂದು ಇಂಟರ್ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ವರದಿ ಮಾಡಿದೆ. ಇಡೀ ದಿನದಲ್ಲಿ ನಿದ್ರಿಸಿದಾಗ ಮಾತ್ರ ಕ್ಯಾಟಲಿ ನ್ ಸೀನುವುದಿಲ್ಲವಂತೆ. ಹಾಗಾಗಿ, ನಾನು ಶಾಂತಿಯಿಂದ ನಿದ್ರಿಸುವುದನ್ನೊಮ್ಮೆ ನಾನೂ ನೋಡಬೇಕು ಎನ್ನುತ್ತಾಳೆ ಕ್ಯಾಟಲಿನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


