ತಾಳ್ಮೆ ಕೆಟ್ಟರೆ ಚೀನಾದತ್ತ ಕೈಚಾಚ್ತೇವೆ: ಭಾರತ ಸರ್ಕಾರಕ್ಕೆ ನೇಪಾಳ ಎಚ್ಚರಿಕೆ
ಪೆಟ್ರೋಲಿಯಂ ಮತ್ತು ಇತರೆ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ನೀವಿದನ್ನು...

Published On :
ಕಠ್ಮಂಡು: ``ಪೆಟ್ರೋಲಿಯಂ ಮತ್ತು ಇತರೆ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ನೀವಿದನ್ನು ಮುಂದುವರಿಸಿದರೆ ನಾವು ಚೀನಾ ಸೇರಿದಂತೆ ಇದರೆ ದೇಶಗಳತ್ತ ಮುಖ ಮಾಡಲು ಹಿಂಜರಿಯುವುದಿಲ್ಲ. ಇದು ಭಾರತ ಸರ್ಕಾರಕ್ಕೆ ನೇಪಾಳ ನೀಡಿರುವ ಎಚ್ಚರಿಕೆ.
ಭಾರತ ಮತ್ತು ನೇಪಾಳದ ನಡುವಿನ ಸಂಬಂಧ ಹದಗೆಡುತ್ತಿರುವ ನಡುವೆಯೇ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೇಪಾಳ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ್, ಪೆಟ್ರೋಲ್, ಡೀಸೆಲ್, ಎಲ್ಪಿಜಿಯನ್ನು ಐಒಸಿ ಮೂಲಕ ನೇಪಾಳಕ್ಕೆ ಪೂರೈಸುವ ಬಗ್ಗೆ ಇಂಡಿಯನ್ ಆಯಿಲ್ ಜತೆ ಒಪ್ಪಂದವಿದೆ.
ಆದರೂ, ಅವರೀಗ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಅಗತ್ಯವಸ್ತುಗಳ ಸರಬರಾಜು ಆಗುತ್ತಿಲ್ಲ. ಇದು ಹೀಗೇ ಮುಂದುವರಿದರೆ ನಾವು ಸಾಗಣೆ ಸಮಸ್ಯೆ ಯಾದರೂ ಚೀನಾದೊಂದಿಗೆ ವ್ಯವಹಾರ ಮಾಡಬೇಕಾಗುತ್ತದೆ'' ಎಂದಿದ್ದಾರೆ.
ಕಾಲಮಿತಿ ಸ್ಪಷ್ಟಪಡಿಸಲಿ: ಸಮಸ್ಯೆ ಬಗೆಹರಿಸಿ ಎಂದು ಭಾರತ ಸರ್ಕಾರವನ್ನು ಕೋರಿ ದ್ದೇವೆ. ಭಾರತವೂ ಪರಿಹರಿಸುವ ಭರವಸೆ ನೀಡಿದೆ. ಆದರೆ, ಅದು ಗಂಟೆಗಳಲ್ಲೋ, ವಾರಗಳಲ್ಲೋ, ತಿಂಗಳುಗಳಲ್ಲೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ಭಾರತ ಸರ್ಕಾರ ಸ್ಪಷ್ಟ ಕಾಲಮಿತಿ ನಿಗದಿಪಡಿಸಿ ಹೇಳಲಿ ಎಂದೂ ರಾಯಭಾರಿ ಉಪಾಧ್ಯಾಯ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


