ಗಡಾಫಿ ಪುತ್ರ ಸೈಫ್-ಅಲ್- ಇಸ್ಲಾಂ ಗೆ ಮರಣದಂಡನೆ ಶಿಕ್ಷೆ
ಲಿಬಿಯಾ ಸರ್ವಾಧಿಕಾರಿಯಾಗಿದ್ದ ಮೊಮರ್ ಗಡಾಫಿ ಪುತ್ರ ಸೈಫ್-ಅಲ್- ಇಸ್ಲಾಂ ಗೆ ಲಿಬಿಯಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಟ್ರಿಪೋಲಿ: ಲಿಬಿಯಾ ಸರ್ವಾಧಿಕಾರಿಯಾಗಿದ್ದ ಮೊಮರ್ ಗಡಾಫಿ ಪುತ್ರ ಸೈಫ್-ಅಲ್- ಇಸ್ಲಾಂ ಗೆ ಲಿಬಿಯಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
2011 ರಲ್ಲಿ ನಡೆದಿದ್ದ ಲಿಬಿಯಾ ಕ್ರಾಂತಿ ವೇಳೆ ನಡೆದಿದ್ದ ಯುದ್ಧಾಪರಾಧವೆಸಗಿದ್ದಕ್ಕೆ ಸೈಫ್-ಅಲ್- ಇಸ್ಲಾಂ ಗೆ ಮರಣದಂಡನೆ ವಿಧಿಸಲಾಗಿದೆ. ನಾಲ್ಕು ವರ್ಷದ ಹಿಂದೆ ಸೈಫ್-ಅಲ್- ಇಸ್ಲಾಂ ನನ್ನು ಬಂಧಿಸಲಾಗಿತ್ತು. ಈತನೊಂದಿಗೆ ಇನ್ನೂ 8 ಜನರಿಗೆ ಇದೇ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ.
2011 ರಲ್ಲಿ ನಡೆದಿದ್ದ ಪ್ರತಿಭಟನೆಯನ್ನು ದಮನ ಮಾಡಿದ್ದಕ್ಕಾಗಿ ಸೈಫ್, ಮೃತ ಸರ್ವಾಧಿಕಾರಿ ಮೊಮಾರ್ ಗಡಾಫಿ ವಿರುದ್ಧ ಲಿಬಿಯಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಜಿಂತನ್ ನಲ್ಲಿ ವಿರೋಧಿ ಬಣದಿಂದ ಬಂಧನಕ್ಕೊಳಗಾಗಿರುವ ಸೈಫ್ ತನ್ನ ವಿರುದ್ಧದ ತೀರ್ಪು ಪ್ರಕಟಾವಾಗಬೇಕಾದರೆ ನ್ಯಾಯಾಲಯದಲ್ಲಿರಲಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


