ಸಂಗೀತ ತರಬೇತಿಯಿಂದ ಹದಿಹರೆಯದ ಮಕ್ಕಳ ಬುದ್ಧಿ ತೀಕ್ಷ್ಣಗೊಳ್ಳುತ್ತದೆ: ಅಧ್ಯಯನ
ಪ್ರೌಢಶಾಲೆಗಳು ಮಕ್ಕಳಿಗೆ ಸಂಗೀತ ತರಬೇತಿ ನೀಡುವುದರಿಂದ ಹದಿಯಹರೆಯದ ಮಕ್ಕಳ ಮಿದುಳು ಚುರುಕಾಗುತ್ತದೆ...

ನ್ಯೂಯಾರ್ಕ್: ಪ್ರೌಢಶಾಲೆಗಳು ಮಕ್ಕಳಿಗೆ ಸಂಗೀತ ತರಬೇತಿ ನೀಡುವುದರಿಂದ ಹದಿಯಹರೆಯದ ಮಕ್ಕಳ ಮಿದುಳು ಚುರುಕಾಗುತ್ತದೆ, ಜೊತೆಗೆ ಭಾಷಾ ಪ್ರೌಢಿಮೆ ಉತ್ತಮವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಸಂಗೀತ ತರಗತಿಗಳಿಂದ ಶೈಕ್ಷಣಿಕ ಯಶಸ್ಸು ದೊರೆಯುತ್ತದೆ. ಹೀಗಾಗಿ ಪ್ರೌಢಾಶಾಲೆ ಗಳಲ್ಲಿ ಸಂಗೀತ ತರಗತಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ನಾರ್ತ್ ವೆಸ್ಟ್ರನ್ ವಿಶ್ವವಿದ್ಯಾನಿಲಯದ ನಿರ್ದೇಶಕಿ ಹಾಗೂ ಹಿರಿಯ ಲೇಖಕರಾದ ನಿನಾ ಕ್ರೌಸ್ ಹೇಳಿದ್ದಾರೆ.
ಶಾಲೆಯ ಹಣಕಾಸಿನ ಪರಿಸ್ಥಿತಿ ತೊಂದರೆಯಲ್ಲಿದ್ದರೇ ಹೈಸ್ಕೂಲ್ ನಿಂದ ಸಂಗೀತ ಕಾರ್ಯಕ್ರಮಗಳನ್ನು ನಡೆಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶಾಲಾ ತರಗತಿಗಳ ಜೊತೆಗೆ ಸಂಗೀತ ತರಗತಿಗಳನ್ನು ನಡೆಸುವುದರಿಂದ ಮಕ್ಕಳ ನರಗಳ ಬೆಳವಣಿಗೆ ವೇಗ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.
ಕ್ರೌಸ್ ಮತ್ತವರ ಸಹೋದ್ಯೋಗಿಗಳು ಚಿಕಾಗೋ ಪ್ರದೇಶದಲ್ಲಿ ಸುಮಾರು 40 ಪ್ರೌಢಾಶಾಲೆ ವಿದ್ಯಾರ್ಥಿಗಳ ಮೇಲೆ ಅಧ್ಯಯನ ನಡೆಸಲಾಯಿತು. ಅದರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ವಾರದಲ್ಲಿ 2 ರಿಂದ ಮೂರು ಗಂಟೆ ಸಮಯ ಬ್ಯಾಂಡ್ ತರಗತಿಗಳಿಗೆ ಹಾಜರಾದರು. ಇನ್ನುಳಿದ ಕೆಲ ವಿದ್ಯಾರ್ಥಿಗಳು ವ್ಯಾಯಾಮ ಶಾಲೆಗೆ ಸೇರಿಕೊಂಡರು. ಇದರಲ್ಲಿ ಸಂಗೀತ ತರಗತಿಗಳಿಗೆ ಹಾಜರಾದ ಮಕ್ಕಳ ಮಿದುಳು ಇತರರಿಗಿಂತ ಶೀಘ್ರವಾಗಿ ಶಬ್ದಕ್ಕೆ ಪ್ರತಿಕ್ರಿಯೆ ನೀಡಿದೆ ಎಂದು ಕ್ರೌಸ್ ಹೇಳಿದ್ದಾರೆ.
ಹೈಸ್ಕೂಲ್ ಗಳಲ್ಲಿ ಸಂಗೀತ ತರಗತಿಗಳನ್ನು ನಡೆಸುವುದರಿಂದ ಮಕ್ಕಳ ಭಾಷಾ ಕೌಶಲ್ಯತೆ ಹೆಚ್ಚುವುದರ ಜೊತೆಗೆ ಬುದ್ದಿಯು ಚುರುಕುಗೊಳ್ಳುತ್ತದೆ. ಹೀಗಾಗಿ ಸಂಗೀತ ತರಗತಿಗಳನ್ನು ಪಠ್ಯದಲ್ಲಿ ಅಳವಡಿಸುವಂತೆ ಕ್ರೌಸ್ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


