ವಿದೇಶ

ರಾಷ್ಟ್ರಪತಿಗೆ ಒಬಾಮ ಶುಭಾಶಯ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಿಷೆಲ್ ಒಬಾಮ ಶುಭಾಶಯ...

ರಾಷ್ಟ್ರಪತಿಗೆ ಒಬಾಮ ಶುಭಾಶಯ
ಬರಾಕ್ ಒಬಾಮ-ಪ್ರಣಬ್ ಮುಖರ್ಜಿ
Published On :
ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಿಷೆಲ್ ಒಬಾಮ ಶುಭಾಶಯ ಕೋರಿದ್ದಾರೆ. 
ವಿಶೇಷವೆಂದರೆ ಶುಭಾಶಯ ಪತ್ರದಲ್ಲಿ ಒಬಾಮ ಕುಟುಂಬದ ಪೋರ್ಚುಗೀಸ್ ತಳಿ ನಾಯಿಗಳಾದ `ಬೋ' ಮತ್ತು `ಸನ್ನಿ'ಗಳ ಕೈ ಗುರುತನ್ನು ಮೂಡಿಸಲಾಗಿದೆ. 
``ನಿಮಗೆ ಸಂತೋಷ ಮತ್ತು ಆರೋಗ್ಯ ಸಿಗಲಿ ಎಂದು ನಾವು ಸಂತೋಷದಿಂದ ಹಾರೈಸುತ್ತೇವೆ'' ಗ್ರೀಟಿಂಗ್ ಕಾರ್ಡ್‍ನಲ್ಲಿ ಉಲ್ಲೇಖಿಸಲಾಗಿದೆ. ಒಬಾಮ, ಮಿಷೆಲ್ ಒಬಾಮ, ಪುತ್ರಿಯರಾದ ಮಾಲಿಯಾ ಮತ್ತು ಸಶಾ ಸಹಿ ಮಾಡಿದ್ದಾರೆ. 
2009 ಮತ್ತು 2013ರಲ್ಲಿ ನಾಯಿಗಳ ಕೈ ಗುರುತು ಗ್ರೀಟಿಂಗ್ ಕಾರ್ಡ್‍ನಲ್ಲಿ ಮೂಡಿಸಲಾಗಿತ್ತು. 2012ರಲ್ಲಿ `ಬೋ' ಎಂಬ ನಾಯಿ ಸ್ಕಾರ್ಫ್ ಟ್ರೆಕಿಂಗ್ ದಿರಿಸು ಧರಿಸಿದ ಫೋಟೋ ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.