ವಿದೇಶ

ಗುಲಾಮ ಮಹಿಳೆಯ ಜತೆ ಸೆಕ್ಸ್ ಮಾಡಲು ಅನುಮತಿ ನೀಡಿದ ಐಎಸ್ ಫತ್ವಾ

ತಮ್ಮ ಅಡಿಯಾಳುಗಳಾಗಿರುವ ಮಹಿಳೆಯರ ಮೇಲೆ ದೌರ್ಜನ್ಯವೆಸಗಲು ಅನುಮತಿ ನೀಡುತ್ತಿರುವ ಇಸ್ಲಾಮಿಕ್ ಸ್ಟೇಟ್ ನ ಫತ್ವಾದ ಪ್ರತಿ ಸುದ್ದಿ ಮಾಧ್ಯಮವೊಂದಕ್ಕೆ...

ಗುಲಾಮ ಮಹಿಳೆಯ ಜತೆ ಸೆಕ್ಸ್ ಮಾಡಲು ಅನುಮತಿ ನೀಡಿದ ಐಎಸ್ ಫತ್ವಾ
ಸಾಂದರ್ಭಿಕ ಚಿತ್ರ
Published On :
ವಾಷಿಂಗ್ಟನ್: ತಮ್ಮ ಅಡಿಯಾಳುಗಳಾಗಿರುವ ಮಹಿಳೆಯರ ಮೇಲೆ ದೌರ್ಜನ್ಯವೆಸಗಲು ಅನುಮತಿ ನೀಡುತ್ತಿರುವ ಇಸ್ಲಾಮಿಕ್ ಸ್ಟೇಟ್ ನ ಫತ್ವಾದ ಪ್ರತಿ ಸುದ್ದಿ ಮಾಧ್ಯಮವೊಂದಕ್ಕೆ ಲಭಿಸಿದೆ.  ಮಹಿಳೆಯನ್ನು ಅಡಿಯಾಳುವನ್ನಾಗಿ ಮಾಡಿಕೊಂಡ ಪುರುಷನು ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಬಹುದುಎಂದು ಫತ್ವಾದಲ್ಲಿ ಹೇಳಲಾಗಿದೆ. ಅಂದ ಹಾಗೆ ಈ ಹಿಂದೆ ಇಸ್ಲಾಮಿಕ್ ಸ್ಟೇಟ್ ಇದಕ್ಕೆ ತದ್ವಿರುದ್ಧವಾದ ನಿಲುವು ಹೊಂದಿತ್ತು.
ರಾಯ್ಟರ್ಸ್ ಸುದ್ದಿ ಮೂಲದ ಪ್ರಕಾರ ಮೇ ತಿಂಗಳಲ್ಲಿ ಸಿರಿಯಾದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಈ ಫತ್ವಾ ಪತ್ತೆಯಾಗಿತ್ತು.
Story image
ಫತ್ವಾದಲ್ಲಿ ಇರುವುದೇನು?
ಅಡಿಯಾಳು ಆಗಿರುವ ಮಹಿಳೆಯ ಜತೆ ಅಪ್ಪ ಮತ್ತು ಮಗ ಇಬ್ಬರೂ ಸೆಕ್ಸ್ ಮಾಡುವಂತಿಲ್ಲ. ಅಮ್ಮ ಮತ್ತು ಮಗಳನ್ನು ಅಡಿಯಾಳು ಮಾಡಿದ್ದರೆ ಅವರಿಬ್ಬರೊಂದಿಗೂ ಸೆಕ್ಸ್ ಮಾಡಬಹುದು. ಆದರೆ ಒಂದೇ ಸಮಯದಲ್ಲಿ ಇಬ್ಬರೊಂದಿಗೂ ಸೆಕ್ಸ್ ಮಾಡಬಾರದು.
ಇಬ್ಬರು ಸೇರಿ ಒಬ್ಬಾಕೆಯನ್ನೇ ಅಡಿಯಾಳು ಮಾಡಿಕೊಂಡಿದ್ದರೆ ಇಬ್ಬರೂ ಆಕೆಯನ್ನು ಭೋಗಿ ಸಬಹುದು. 
ಅಡಿಯಾಳು ಆಗಿರುವ ಮಹಿಳೆ ಗರ್ಭಿಣಿಯಾದರೆ ಆಕೆಯ ಗರ್ಭಪಾತ ಮಾಡುವಂತಿಲ್ಲ. ಹೆರಿಗೆಯ ವರೆಗೆ ಆಕೆಗೆ ಯಾವುದೇ ತೊಂದರೆ ಮಾಡುವಂತಿಲ್ಲ.
ಅಡಿಯಾಳನ್ನು ಇಟ್ಟುಕೊಂಡಿರುವಾತ ಆಕೆಯಿಂದ ಸಾಧ್ಯವಾಗುವ ಕೆಲಸವನ್ನಷ್ಟೇ ಮಾಡಿಸಬೇಕು. ಹೆಚ್ಚು ಕಷ್ಟ ಕೊಡಬಾರದು. 
ದೌರ್ಜನ್ಯವೆಸಗುತ್ತಾನೆ ಎಂದು ಗೊತ್ತಿದ್ದರೆ ಅಂಥಾ ವ್ಯಕ್ತಿಗಳಿಗೆ ಅಡಿಯಾಳು ಮಹಿಳೆಯನ್ನು ಮಾರುವಂತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.