ಮೋದಿ- ಷರೀಫ್ ಮಾತುಕತೆ ವೇಳೆ ಕಾಶ್ಮೀರ ವಿಷಯದ ಬಗ್ಗೆಯೂ ಚರ್ಚೆ: ಪಾಕ್ ಟಿವಿ ವರದಿ
ನರೇಂದ್ರ ಮೋದಿ ಅವರ ದಿಢೀರ್ ಪಾಕಿಸ್ತಾನ ಭೇಟಿ ವೇಳೆ ನವಾಜ್ ಷರೀಫ್-ಮೋದಿ ನಡುವೆ ನಡೆದ ಮಾತುಕತೆಯಲ್ಲಿ ಕಾಶ್ಮೀರ ವಿಷಯವೂ ಚರ್ಚೆಗೆ ಬಂದಿದೆ ಎಂದು ಪಾಕಿಸ್ತಾನದ ಟಿವಿ ವರದಿ ಮಾಡಿದೆ.

ಲಾಹೋರ್: ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ಪಾಕಿಸ್ತಾನ ಭೇಟಿ ವೇಳೆ ನವಾಜ್ ಷರೀಫ್-ಮೋದಿ ನಡುವೆ ನಡೆದ ಮಾತುಕತೆಯಲ್ಲಿ ಕಾಶ್ಮೀರ ವಿಷಯವೂ ಚರ್ಚೆಗೆ ಬಂದಿದೆ ಎಂದು ಪಾಕಿಸ್ತಾನದ ಜಿಯೋ ಟಿವಿ ವರದಿ ಮಾಡಿದೆ.
ಮೋದಿ- ನವಾಜ್ ಷರೀಫ್ ನಡೆಸಿದ ಅನೌಪಚಾರಿಕ ಚರ್ಚೆ ವೇಳೆ ದ್ವಿಪಕ್ಷೀಯ ಸಂಬಂಧವನ್ನು ಮುಂದುವರೆಸುವ ವಿಷಯದೊಂದಿಗೆ, ಕಾಶ್ಮೀರ ವಿವಾದವೂ ಚರ್ಚೆಗೆ ಬಂದಿದೆ ಎಂದು ಹೇಳಲಾಗುತ್ತಿದೆ. ನವಾಜ್ ಷರೀಫ್ ಅವರೊಂದಿಗಿನ ಚರ್ಚೆಯ ವೇಳೆ ಉಭಯ ನಾಯಕರೂ ಕಾಶ್ಮೀರದ ಚಹಾ ಸೇವಿಸಿದ್ದು ಸುದ್ದಿಯಾಗಿತ್ತು. ಆದರೆ ಈಗ ಪಾಕಿಸ್ತಾನದ ಚಾನೆಲ್ ಒಂದು ಮೋದಿ- ಷರೀಫ್ ಕಾಶ್ಮೀರದ ವಿಷಯದ ಬಗ್ಗೆ ಮಾತನಾಡಿರುವುದಾಗಿ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


