ವಿದೇಶ

ಒಬಾಮ- ಮೋದಿ ನಡುವಿನ ಪರಿಣಾಮಕಾರಿ ಸಂಬಂಧದಿಂದ ಪ್ಯಾರಿಸ್ ಒಪ್ಪಂದ ಯಶಸ್ವಿ: ಅಮೆರಿಕ ಅಧಿಕಾರಿ

ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದ ಸಾಧ್ಯವಾಗಿದ್ದು ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನಡುವಿನ ಉತ್ತಮ ಸಂಬಂಧದಿಂದ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಬಾಮ- ಮೋದಿ ನಡುವಿನ ಪರಿಣಾಮಕಾರಿ ಸಂಬಂಧದಿಂದ ಪ್ಯಾರಿಸ್ ಒಪ್ಪಂದ ಯಶಸ್ವಿ: ಅಮೆರಿಕ ಅಧಿಕಾರಿ
ನರೇಂದ್ರ ಮೋದಿ- ಬರಾಕ್ ಒಬಾಮ(ಸಂಗ್ರಹ ಚಿತ್ರ)
Published On :

ವಾಷಿಂಗ್ಟನ್: ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದ ಸಾಧ್ಯವಾಗಿದ್ದು ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನಡುವಿನ ಉತ್ತಮ ಸಂಬಂಧದಿಂದ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಪ್ಪಂದ ನಡೆಯುವುದಕ್ಕೂ ಒಂದು ದಿನದ ಮುನ್ನ ಬರಾಕ್ ಒಬಾಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದರು. ಒಬಾಮ ಮೋದಿ ಅವರಿಗೆ ಕರೆ ಮಾಡದೇ ಇದ್ದಿದ್ದರೆ ಒಪ್ಪಂದ ಯಶಸ್ವಿಯಾಗುತ್ತಿರಲಿಲ್ಲ ಎಂದು ಹವಾಮಾನ ಬದಲಾವಣೆಯ ಅಮೆರಿಕದ ವಿಶೇಷ ಪ್ರತಿನಿಧಿ ಟೋಡ್ ಸ್ಟರ್ನ್ ಅಭಿಪ್ರಾಯಪಟ್ಟಿದ್ದಾರೆ.    
ಕೇವಲ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಬರಾಕ್ ಒಬಾಮ ಹಾಗೂ ಮೋದಿ ಪರಿಣಾಮಕಾರಿ ಸಂಬಂಧ ಹೊಂದಿಲ್ಲ, ಎಲ್ಲಾ ವಿಷಯಗಳ ಬಗ್ಗೆಯೂ ಉಭಯ ನಾಯಕರ ಸಂಬಂಧ ಪರಿಣಾಮಕಾರಿಯಾಗಿರಲಿದೆ ಎಂದು ಟೋಡ್ ಸ್ಟರ್ನ್ ಹೇಳಿದ್ದಾರೆ.
ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ ಕೇವಲ ನಾಲ್ಕು ತಿಂಗಳಲ್ಲೇ ಉಭಯ ನಾಯಕರು ಉಭಯ ದೇಶಗಳಿಗೆ ಪರಸ್ಪರ ಭೇಟಿ ನೀಡಿದ್ದರು, ಇದೊಂದು ಅಭುತ ಅಂಶವಾಗಿದ್ದು ಒಬಾಮ- ಮೋದಿ ವಿಶಾಲ ದೃಷ್ಟಿಕೋನ ಹೊಂದಿದ್ದಾರೆ ಎಂದು ಟೋಡ್ ಸ್ಟರ್ನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.