ವಿದೇಶ

ಬಾಗ್ದಾದ್‌ನಲ್ಲಿ ಪ್ರಬಲ ಬಾಂಬ್ ಸ್ಪೋಟ: 76 ಸಾವು, 200 ಮಂದಿಗೆ ಗಾಯ

ಇರಾಕ್ ಮತ್ತು ಸಿರಿಯಾದಲ್ಲಿ ವಿದ್ವಂಸಕ ದಾಳಿಗಳ ಮೂಲಕ ದುಷ್ಕೃತ್ಯ ಎಸಗುತ್ತಿರುವ ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರ ಸಂಘಟನೆ ಇರಾಕ್ ನ ರಾಜಧಾನಿ...

ಬಾಗ್ದಾದ್‌ನಲ್ಲಿ ಪ್ರಬಲ ಬಾಂಬ್ ಸ್ಪೋಟ: 76 ಸಾವು, 200 ಮಂದಿಗೆ ಗಾಯ
ಬಾಂಬ್ ಸ್ಫೋಟ
Published On :
ಬಾಗ್ದಾದ್: ಇರಾಕ್ ಮತ್ತು ಸಿರಿಯಾದಲ್ಲಿ ವಿದ್ವಂಸಕ ದಾಳಿಗಳ ಮೂಲಕ ದುಷ್ಕೃತ್ಯ ಎಸಗುತ್ತಿರುವ ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರ ಸಂಘಟನೆ ಇರಾಕ್ ನ ರಾಜಧಾನಿ ಬಾಗ್ದಾದ್ ನ ಪ್ರಮುಖ ಮಾರುಕಟ್ಟೆಯೊಂದರ ಬಳಿ ಬಸ್ಸೊಂದರಲ್ಲಿ ಪ್ರಬಲ ಬಾಂಬ್ ಸ್ಪೋಟಿಸಿದ್ದು, ಸ್ಫೋಟದಲ್ಲಿ 76 ಮಂದಿ ಮೃತಪಟ್ಟಿದ್ದು, 200 ಮಂದಿಗೆ ಗಾಯಗಳಾಗಿವೆ. 
ಬಾಗ್ದಾದ್'ನ ಜನನಿಬಿಡ ಸದರೆ ಸಿಟಿಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಈವರೆಗೆ 76 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.
ಶಿಯಾ ಪಂಗಡದ ಜನರಿರುವ ಪ್ರದೇಶವನ್ನೇ ಗುರಿಯಾಗಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ದಾಳಿಗಳನ್ನು ನಡೆಸುತ್ತಾ ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.