ವಿದೇಶ

ಹೀಗೂ ಪೀಡಿಸ್ತವೆ ಕೆಲವು ಶಾಲೆಗಳು!

ಶಾಲೆ ನಡೆಸುವವರು ದುಡ್ಡಿನ ಹಿಂದೆ ಬಿದ್ದು ಮಾನವೀಯತೆ, ಅಂತಃಕರಣ ಕಳೆದು ಕೊಂಡಿರುವ ಘಟನೆ...

ಹೀಗೂ ಪೀಡಿಸ್ತವೆ ಕೆಲವು ಶಾಲೆಗಳು!
ಬಹರೈನ್ ಶಾಲೆ
Published On :

ದುಬೈ: ಶಾಲೆ ನಡೆಸುವವರು ದುಡ್ಡಿನ ಹಿಂದೆ ಬಿದ್ದು ಮಾನವೀಯತೆ, ಅಂತಃಕರಣ ಕಳೆದು ಕೊಂಡಿರುವ ಘಟನೆಯಿದು.
ಬಹರೈನ್ ಮೂಲದ ಭಾರತೀಯ ಶಾಲೆಯೊಂದು ವಿದ್ಯಾರ್ಥಿನಿಯೊಬ್ಬಳ ಪೋಷಕರಿಗೆ ಆಕೆಯ ವಾರ್ಷಿಕ ಶುಲ್ಕ ಬಾಕಿಯನ್ನು ಕೂಡಲೇ ಪಾವತಿಸುವಂತೆ ಒತ್ತಡ ಹೇರಿದೆ. ದುರಂತವೆಂದರೆ ಆ ವಿದ್ಯಾರ್ಥಿನಿ ತೀರಿಕೊಂಡು ಆರು ತಿಂಗಳು ಕಳೆದಿವೆ!

ಹೌದು. ಅಭಿಯಾ ಶ್ರೇಯಾ ಎಂಬ ವಿದ್ಯಾರ್ಥಿನಿ ಚಿಕನ್‍ಪಾಕ್ಸ್‍ಗೆ ತುತ್ತಾಗಿ ಜನವರಿಯಲ್ಲಿ ಸಾವಿಗೀಡಾಗಿದ್ದಳು. ಶಾಲೆಗೆ ಪೋಷಕರು ಸುದ್ದಿ ತಿಳಿಸಿ, ಆಕೆಯ ಹೆಸರನ್ನು ಶಾಲಾ ಪಟ್ಟಿಯಿಂದ ಹೊರಗಿಡಲು ಕೋರಿದ್ದರು. ಆದರೆ ಶುಲ್ಕ ಭರಿಸಬೇಕೆಂದು ಶಾಲೆಯಿಂದ ಪದೇಪದೆ ಒತ್ತಡ ಕರೆಗಳು ಬರುತ್ತಲೇ ಇದ್ದವು.

ಮಗಳ ಸಾವಿಂದ ಜರ್ಜರಿತರಾಗಿದ್ದ ತಾಯಿ ಶೈನಿ ಇದರಿಂದ ಖಿನ್ನತೆಗೆ ಒಳಗಾಗಿದ್ದರೆಂದು ಪತಿ ಜೋಸೆಫ್ ಚೆರಿಯನ್ ಗಲ್ಫ್ ನ್ಯೂಸ್‍ನೆದುರು ಅಳಲು ಹೇಳಿಕೊಂಡಿದ್ದಾರೆ. ನಂತರ ಶಾಲಾ ವ್ಯವಸ್ಥಾಪಕ ಮಂಡಳಿ ಕ್ಷಮೆ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.