ಶಾಂತಿ ಮೇಡಂ...ನೀವೇ ನಮಗೆ ಸ್ಪೂರ್ತಿ
ಉನ್ನತ ಸ್ಥಾನಗಳನ್ನ ಯಶಸ್ವಿಯಾಗಿ ನಿಭಾಯಿಸುತ್ತಿರುವ ಇಂದಿನ ಹಲವು ಮಹಿಳೆಯರು, ಮಹಿಳಾ ಸಮಾನತೆಯ...

ಉನ್ನತ ಸ್ಥಾನಗಳನ್ನ ಯಶಸ್ವಿಯಾಗಿ ನಿಭಾಯಿಸುತ್ತಿರುವ ಇಂದಿನ ಹಲವು ಮಹಿಳೆಯರು, ಮಹಿಳಾ ಸಮಾನತೆಯ ದ್ಯೋತಕಗಳಾಗಿ, ಇತರೆ ಮಹಿಳೆಯರಿಗಲ್ಲದೆ ಪುರುಷರಿಗೂ ಸ್ಪೂರ್ತಿಯಾಗಿದ್ದಾರೆ. ಇವರ ಸಾಲಿನಲ್ಲೆ ನಿಲ್ಲುವ ಮಹಿಳೆ ನಮ್ಮ ಮೇಡಂ ಶಾಂತಿ. ನನ್ನ ಹಾಗೂ ನನ್ನ ಎಲ್ಲ ಸಹೋದ್ಯೊಗಳಿಗೆ ಇನ್ ಕಮ್ ಟ್ಯಾಕ್ಸನ ಸ್ಪಷ್ಟ ಚಿತ್ರಣ ನೀಡಿ, ನಮಗೆಲ್ಲಾ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅವರಿತ್ತ ಮುನ್ನುಡಿಯೇ ಕಾರಣ. ಆದಾಯ ತೆರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಸದ್ಯ ಎಂ.ಎಸ್.ಆರ್.ಟಿ.ಐ ನ ಆಡಳಿತಾಧಿಕಾರಿಯಾಗಿದ್ದು, ಹೊಸದಾಗಿ ನೇಮಕಗೊಂಡ ಇಲಾಖೆಯ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದ್ದಾರೆ. ನಮ್ಮ 35 ಸದಸ್ಯರ ತಂಡಕ್ಕೆ ಇವರಿತ್ತ ಕೊಡುಗೆಯನ್ನು, ತರಬೇತಿಯನ್ನು ನಾವೆಲ್ಲ ನಿವೃತ್ತಿಯಾಗುವವರೆಗು ಮರೆಯಲು ಸಾಧ್ಯವಿಲ್ಲ.
ತರಬೇತಿ ಆರಂಭಗೊಂಡ ಕೆಲ ದಿನಗಳಲ್ಲೆ ನಮ್ಮೆಲ್ಲರ ನಡುವೆ ಒಂದು ರೀತಿಯ ಪರಸ್ಪರ ಪೂರಕ ವಾತವರಣ ನಿರ್ಮಿಸಿ, ತರಬೇತಿಗೆ ನಮ್ಮೆಲ್ಲರನ್ನು ಅಣಿಯಾಗಿಸಿದರು. ಇಲಾಖೆಯ ಬಗ್ಗೆ ಅವರಿಗಿದ್ದ ಪರಿಪೂರ್ಣ ತಿಳುವಳಿಕೆ, ಅವರ ಸಮಯ ಪರಿಪಾಲನೆ, ಅವರ ಸಂಯಮ ಚಿತ್ತ, ಎಲ್ಲಾ ಸದಸ್ಯರನ್ನು ತರಬೇತಿಯಲ್ಲಿ ಲೀನವಾಗುವಂತೆ ಮಾಡಿತ್ತು.
ಶಾಂತಿ ಮೇಡಂ ನಮಗೆಲ್ಲ ತರಬೇತಿ ನೀಡಿದ್ದು ನಮ್ಮ ತಂಡದ ಸದಸ್ಯರ ಪುಣ್ಯವೇ ಸರಿ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ, ಮನೆ ಮತ್ತು ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಇಂತಹ ಮಹಿಳೆಯರನ್ನು ಮರೆಯಲು ಸಾಧ್ಯವೇ?
- ಅರ್ಪಿತಾ ನಾರಾಯಣ್ (೨೦೧೩ ತರಬೇತಿ ಪಡೆದ ತಂಡದ ಪರವಾಗಿ)
ಆದಾಯ ತೆರಿಗೆ ಇಲಾಖೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


