Watch | 'ನಮಗೆ ಇನ್ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'
ನಮಗೆ ಇನ್ನು ಮುಂದೆ ಗಾಂಧಿ ಅಥವಾ ನೆಹರೂ ಅವರ ಅಗತ್ಯವಿಲ್ಲ, ನಮಗೆ ನಮ್ಮದೇ ಆದ ನಾಯಕರು ಬೇಕು ಎಂದು AIMIM ಮುಖಂಡ ಅಸದುದ್ದೀನ್ ಓವೈಸಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾತನಾಡಿದ ಅವರು, ನಮ್ಮ ಸಂಕಷ್ಟಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ.
ಆದರೂ ಇಂದು, ಪೊಲೀಸರು ಯಾರನ್ನಾದರೂ ವಶಕ್ಕೆ ಪಡೆದು, ಒಂದು ವರ್ಷದವರೆಗೆ ಪ್ರತಿಭಟನೆ ನಡೆಸದಂತೆ ಆದೇಶಿಸುತ್ತಾರೆ.
'ಓ ಮುಸ್ಲಿಮರೇ, ಅವರನ್ನು ಬೆಂಬಲಿಸಿ ಅವರ ನಡುವಿನಿಂದಲೇ ನೆಹರೂ ಮತ್ತು ಗಾಂಧಿಯಂತಹವರು ಉದಯಿಸುತ್ತಾರೆ' ಎಂದು ಹೇಳುವುದನ್ನು ನಾನು ನೋಡಿದ್ದೇನೆ.
ಅವರಿಗೂ ಮತ್ತು ಓವೈಸಿಗೂ ಇರುವ ವ್ಯತ್ಯಾಸವಿದು ಎಂದಿದ್ದಾರೆ. ನಾನು 'ನೀವೇ ನಾಯಕರಾಗಿ' ಎನ್ನುತ್ತೇನೆ.
ನಾವು ಯಾರಿಗೂ ಗುಲಾಮರಲ್ಲ. ಯಾರಾದರೂ ತಮ್ಮನ್ನು ತಾವು ಮುಂದಿನ ನೆಹರೂ ಅಥವಾ ಗಾಂಧಿ ಎಂದು ಕರೆದುಕೊಂಡ ಮಾತ್ರಕ್ಕೆ ನಾವು ಅವರ ಹಿಂದೆ ಓಡುವುದಿಲ್ಲ...
ನಮಗೆ ಇನ್ನು ಮುಂದೆ ಗಾಂಧಿ ಅಥವಾ ನೆಹರೂ ಅವರ ಅಗತ್ಯವಿಲ್ಲ; ನಮಗೆ ನಮ್ಮದೇ ಆದ ನಾಯಕರು ಬೇಕು ಎಂದು ಅವರು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

