Watch | ಕೇಜ್ರಿವಾಲ್ ನಿವಾಸ 'ಶೀಶ್ ಮಹಲ್ 2'- BJP ಟೀಕೆ; ಮಾನನಷ್ಟ ಮೊಕದ್ದಮೆ- AAP ಎಚ್ಚರಿಕೆ
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣದ ಕುರಿತು ಭಾರತೀಯ ಜನತಾ ಪಕ್ಷ ಆರೋಪಗಳನ್ನು ಮಾಡಿದ್ದು, “ಶೀಶ್ ಮಹಲ್ 2” ಎಂದು ಟೀಕಿಸಿದೆ.
ದೆಹಲಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಪರ್ವೇಶ್ ವರ್ಮಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೇಜ್ರಿವಾಲ್ “ಕಾಮನ್ ಮ್ಯಾನ್” ಇಮೇಜ್ ಅನ್ನು ತ್ಯಜಿಸಿದ್ದು, ಲೋದಿ ಎಸ್ಟೇಟ್‌ನಲ್ಲಿರುವ ಅವರ ನಿವಾಸವನ್ನು ನಿಯಮಗಳಿಗಿಂತ ಹೆಚ್ಚಾಗಿ ಐಷಾರಾಮಿಯಾಗಿ ನವೀಕರಣ ಮಾಡಲಾಗಿದೆ.
ಇದೇ ವೇಳೆ ಫೋಟೋಗಳನ್ನೂ ಪ್ರದರ್ಶಿಸಿರುವ ಅವರು, ಅವು ಕೇಜ್ರಿವಾಲ್ ನಿವಾಸದ ಒಳಾಂಗಣದ ದೃಶ್ಯಗಳೆಂದು ಹೇಳಿದ್ದಾರೆ. ಜೊತೆಗೆ, ಈ ಮನೆ ಈಗ “ಶೀಶ್ ಮಹಲ್ 2” ಆಗಿದೆ ಎಂದು ಟೀಕೆ ಮಾಡಿದ್ದಾರೆ.
ಈ ಆರೋಪಗಳನ್ನು ಆಮ್ ಆದ್ಮಿ ಪಕ್ಷ ಸಂಪೂರ್ಣವಾಗಿ ತಿರಸ್ಕರಿಸಿದೆ.
ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಬಿಜೆಪಿ ಪ್ರದರ್ಶಿಸಿದ ಫೋಟೋಗಳು “ನಕಲಿ” ಎಂದು ಹೇಳಿದ್ದು, ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

