ನನ್ನೆದೆಯ ಗುಡಿಯಲ್ಲಿ ನೀನೇ...
ಅವನ ಭಾಷೆ ನನಗೆ ಬರ್ತಿರ್ಲಿಲ್ಲ, ನನ್ನ ಭಾಷೆ ಅವನಿಗೆ ಅರ್ಥವಾಗಿರ್ತಿಲ್ಲಿಲ್ಲ. ಯಾಕಂತ ಗೊತ್ತಿಲ್ಲ ಆಫೀಸಿನ ಮೊದಲ ದಿನದಿಂದ ಅವನು ತುಂಬಾ ಇಷ್ಟವಾಗಿಬಿಟ್ಟು...

ನನ್ನಲ್ಲಿ ಪ್ರೀತಿ ಶುರುವಾಗಿದ್ದು 3 ವರ್ಷದ ಕೆಳಗೆ. ಅವನ ಭಾಷೆ ನನಗೆ ಬರ್ತಿರ್ಲಿಲ್ಲ, ನನ್ನ ಭಾಷೆ ಅವನಿಗೆ ಅರ್ಥವಾಗಿರ್ತಿಲ್ಲಿಲ್ಲ. ಯಾಕಂತ ಗೊತ್ತಿಲ್ಲ ಆಫೀಸಿನ ಮೊದಲ ದಿನದಿಂದ ಅವನು ತುಂಬಾ ಇಷ್ಟವಾಗಿಬಿಟ್ಟು. ಗೊತ್ತಿಲ್ಲದೇನೇ ಪ್ರೀತಿಸಿಬಿಟ್ಟೆ. ಬಿಟ್ಟಿಲರಾದಷ್ಟು ಆದ್ರೆ ನನ್ನ ಪ್ರೀತಿನಾ ಅವನ ಹತ್ರ ಹೇಳಿಕೊಳ್ಳಲೇ ಇಲ್ಲ. ಎಲ್ಲಿ ನಿರಾಕರಿಸಿಬಿಡ್ತಾನೋ ಅಂಥ . ಅವನ ಜೊತೆಗೆ ಇದ್ರೂ ಅವ್ನ ನಾನು ಸತ್ತೋಗಿರೋವಷ್ಟು ಪ್ರೀತಿಸ್ತಾ ಇದ್ದೀನಿ ಅನ್ನೋದು ಅವನಿಗೆ ಗೊತ್ತಾಗಲೇ ಇಲ್ಲ. ಈ ನಡುವೆ ನಂಗೆ ಮದ್ವೆ ಆಯ್ತು. ನನಗೆ ತಾಳಿ ಕಟ್ಟಿದವರಿಗೆ ನಾನು ಇಷ್ಟ ಇರಲಿಲ್ಲ ಅನ್ನೋದು ಮದ್ವೆ ಆದ 3 ದಿನಕ್ಕೆ ಗೊತ್ತಾಯ್ತು. ಏನು ಹೇಳೋ ಸ್ಥಿತಿಲೀ ನಾನಿರಲಿಲ್ಲ. ನನ್ನವರ ಬಳಿ ನಾನೇನೂ ಕೇಳಲಿಲ್ಲ. ಪ್ರೀತಿಸಿದವನ ನೆನಪಲ್ಲೇ ಅವನ ಜೊತೆ ಕಳೆದ ಮಧುರ ಕ್ಷಣಗಳ ನೆನಪಿನಲ್ಲಿ ನನ್ನೆದೆಯೊಳಗೆ ಬದುಕಿನ ಗುಡಿ ಕಟ್ಟಿ ನನ್ನವನ ಅದರಲ್ಲಿಟ್ಟು ಪೂಜಿಸ್ತಾ , ಪ್ರೀತಿಸ್ತಾ ಇದ್ದೀನಿ. ಪ್ರೀತಿಸ್ತಾನೇ ಇರ್ತೀನಿ ಬದುಕಿನುದ್ದಕ್ಕೂ ...ನನ್ನವನು ರಾಜಕುಮಾರ... ನಾನವನ ರಾಜಕುಮಾರಿ
-ಭಾಗ್ಯ ಬೊಬ್ಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


