ರಾಜಕೀಯಕರ್ನಾಟಕದ ಗೆಲುವು ಕೇಂದ್ರದಲ್ಲಿ ಬಿಜೆಪಿ ಸೋಲಿಗೆ ನಾಂದಿ ಹಾಡಿದೆ: ಕಾಂಗ್ರೆಸ್
ತಮ್ಮ ಹಿತಾಸಕ್ತಿಗಳನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದಿರುವ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. ಅದೇ ರೀತಿಯಲ್ಲಿಯೇ ಕೇಂದ್ರದಲ್ಲೂ ಬದಲಾವಣೆ ತರಬೇಕಿದೆ ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಅವರು ಗುರುವಾರ ಹೇಳಿದ್ದಾರೆ.