ರಾಜ್ಯರಾಜ್ಯಕ್ಕೆ ಬರಲು ಅರ್ಜಿ ಸಲ್ಲಿಸಿದ ಹೊರರಾಜ್ಯ ಕನ್ನಡಿಗರ ಸಂಖ್ಯೆ 56 ಸಾವಿರ, ಸರ್ಕಾರ ಅನುಮತಿಸಿದ್ದು ಶೇ.7 ರಷ್ಟು ಮಾತ್ರ!
ಕೊರೋನಾ ಹಿನ್ನೆಲೆ ಹೊರರಾಜ್ಯದಲ್ಲಿರುವ ಕನ್ನಡಿಗರಿಗೆ ರಾಜ್ಯಕ್ಕೆ ಮರಳಲು ನೋಂದಣಿ ಪ್ರಾರಂಬಗೊಂಡ ಐದು ದಿನಗಳ ನಂತರ, ಇತರ ರಾಜ್ಯಗಳಲ್ಲಿ ಸಿಲುಕಿರುವ 56,000 ಕ್ಕೂ ಹೆಚ್ಚು ಕನ್ನಡಿಗರು ತಮ್ಮ ತಮ್ಮ ಊರಿಗೆ ಮರಳಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ ಕೇವಲ 7 ಪ್ರತಿಶತದಷ್ಟು ಅರ್ಜಿಗಳನ್ನಷ್ಟೇ ರಾಜ್ಯ ಸರ್ಕಾರ ಅನುಮೋದಿಸಿದೆ.