ಹೊಟೇಲ್

ಕೋಲ್ಕತ್ತಾ: ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ; 9 ಮಂದಿ ಸಾವು, 6 ಜನರಿಗೆ ಗಾಯ; Video
ಅಗ್ನಿಶಾಮಕ ದಳ ಪ್ರಕಾರ, ಬೆಂಕಿ ಅವಘಡದಲ್ಲಿ ಮೃತಪಟ್ಟ ಒಂಬತ್ತು ಮಂದಿಯೂ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಬಂದಿದ್ದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಬೆಂಗಳೂರು: ಹೊಟೇಲ್ ನಲ್ಲಿ ಬೆಂಕಿ, ಓರ್ವ ಸಿಬ್ಬಂದಿ ಸಾವು, ನಾಲ್ವರಿಗೆ ಗಾಯ
ನಾಗರಬಾವಿಯ ರಿಂಗ್ ರೋಡ್ ಬಳಿಯ ಸರ್ವೀಸ್ ರೋಡ್‌ನಲ್ಲಿರುವ ಶಾಸಗಿ ಹೋಟೆಲ್ ನಲ್ಲಿ ನಿನ್ನೆ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಕ್ರಮ, 54 ಅಂಗಡಿಗಳಿಗೆ ದಂಡ
ಆಹಾರ ಸುರಕ್ಷತಾ ಇಲಾಖೆ ಬುಧವಾರದವರೆಗೆ 251 ಇಡ್ಲಿ ಮಾದರಿಗಳನ್ನು ಪರಿಶೀಲಿಸಿದೆ. ಇವುಗಳಲ್ಲಿ 54 ಸೇವನೆಗೆ ಅಸುರಕ್ಷಿತವೆಂದು ಕಂಡುಬಂದಿದೆ.

ಹಾನಗಲ್ ನಲ್ಲಿ ಜೋಡಿ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಗ್ಯಾಂಗ್ ರೇಪ್ ಕೇಸ್ ದಾಖಲು, ಇಂಚಿಂಚು ಮಾಹಿತಿ ನೀಡಿದ ಪೊಲೀಸರು
ಜಿಲ್ಲೆಯ ಹಾನಗಲ್ ನ ಹೊಟೇಲ್ ಕೊಠಡಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಕೊಠಡಿಗೆ ನುಗ್ಗಿ ಅಂತರ ಧರ್ಮೀಯ ದಂಪತಿ ಮೇಲೆ ಹಲ್ಲೆ ನಡೆಸಿದ ಏಳು ಮಂದಿ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ನೀಡಿದ ದೂರಿದ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ನೈಟ್ ಕರ್ಫ್ಯೂ ಸಮಯದಲ್ಲಿ ಗ್ರಾಹಕರಿಗೆ ಊಟ ಮಾಡಲು ಅವಕಾಶ: ಮೈಸೂರಿನಲ್ಲಿ ಹೊಟೇಲ್ ಮಾಲೀಕರ ಮೇಲೆ ಪೊಲೀಸರ ಹಲ್ಲೆ
ರಾತ್ರಿ ಕರ್ಫ್ಯೂ ಸಮಯದಲ್ಲಿ ಗ್ರಾಹಕರಿಗೆ ಊಟ ಮಾಡಲು ಅವಕಾಶ ನೀಡಿದ್ದಕ್ಕಾಗಿ ಪೊಲೀಸರು ಮೈಸೂರಿನಲ್ಲಿ ಹೊಟೇಲ್ ಮಾಲೀಕರಿಗೆ ಹೊಡೆದಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಸಂಕಷ್ಟ ಎದುರಿಸುತ್ತಿರುವ ಹೊಟೇಲ್, ರೆಸಾರ್ಟ್ ಗಳ ವಿದ್ಯುತ್ ಬಿಲ್ ಗೆ ವಿನಾಯ್ತಿ ಕೊಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
ಕೋವಿಡ್-19ನಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಆತಿಥ್ಯ ವಲಯಗಳಾದ ಹೊಟೇಲ್, ರೆಸಾರ್ಟ್ಸ್ ಮತ್ತು ಲಾಡ್ಜ್ ಗಳ ವಿದ್ಯುತ್ ಶುಲ್ಕ ಪಾವತಿಗೆ ವಿನಾಯ್ತಿ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಿಚನ್ ನಿಂದ ಮನೆಗೆ: ಗ್ರಾಹಕರಿಗೆ ನೇರವಾಗಿ ಆಹಾರ ತಲುಪಿಸುತ್ತಿರುವ ಹೊಟೇಲ್ ಗಳು
ಕೆಲ ದಿನಗಳ ಹಿಂದೆ ಡೊಟ್ಪೆ ವಿಡಿಯೊವೊಂದನ್ನು ಬಿಡುಗಡೆ ಮಾಡಿ ಗ್ರಾಹಕರಲ್ಲಿ ನೇರವಾಗಿ ರೆಸ್ಟೋರೆಂಟ್ ಗಳಿಂದ ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದು ಎಂದು ಮನವಿ ಮಾಡಿಕೊಂಡಿತ್ತು. ತಮ್ಮ ವ್ಯಾಪಾರ ಉದ್ದೇಶಕ್ಕೆ ಡೊಟ್ಪೆ ಮಾಡಿಕೊಂಡ ಈ ವಿಡಿಯೊ ಹಲವು ರೆಸ್ಟೋರೆಂಟ್ ಗಳ ವ್ಯಾಪಾರದ ಕಾರ್ಯವೈಖರಿ ಮೇಲೆ ಪರಿಣಾಮ ಬೀರಿದೆ.

ವಿಜಯವಾಡದ ಕೋವಿಡ್ ಕೇರ್ ಹೊಟೇಲ್ ನಲ್ಲಿ ಅಗ್ನಿ ಅವಘಡ, ಮೃತರ ಸಂಖ್ಯೆ 10ಕ್ಕೇರಿಕೆ, ಸರ್ಕಾರ ತಲಾ 50 ಲಕ್ಷ ರೂ ಪರಿಹಾರ
ಇತ್ತೀಚೆಗೆ ದುರಂತದ ಮೇಲೆ ದುರಂತಗಳು ನಡೆಯುತ್ತವೇ ಇವೆ. ಆಂಧ್ರಪ್ರದೇಶದ ವಿಜಯವಾಡದ ಸ್ವರ್ಣ ಪ್ಯಾಲೆಸ್ ಹೊಟೇಲ್ ನಲ್ಲಿ ಭಾನುವಾರ ನಸುಕಿನ ಜಾವ ಅಗ್ನಿ ಅವಘಡ ಉಂಟಾಗಿದ್ದು ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ.

ಲಾಕ್ ಡೌನ್ ಎಫೆಕ್ಟ್: ಶೇ.25ರಷ್ಟು ಹೊಟೇಲ್, ರೆಸ್ಟೋರೆಂಟ್ ಗಳಿಗೆ ಬಾಗಿಲು ತೆರೆಯುವ ಸೌಭಾಗ್ಯವೇ ಇಲ್ಲ!
ಕೊರೋನಾ ಲಾಕ್ ಡೌನ್ ನಂತರ ಆರ್ಥಿಕ ದುಸ್ಥಿತಿಯಿಂದ ಅನೇಕ ಹೊಟೇಲ್, ರೆಸ್ಟೋರೆಂಟ್ ಗಳಿಗೆ ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಮೊನ್ನೆ ಸೋಮವಾರದಿಂದ ಹೊಟೇಲ್, ರೆಸ್ಟೋರೆಂಟ್ ತೆರೆಯುವಿಕೆಗೆ ಸರ್ಕಾರ ಅವಕಾಶ ನೀಡಿದರೂ ಕೂಡ ಕೆಲವರಿಗೆ ಆರ್ಥಿಕ ದುಸ್ಥಿತಿಯಿಂದ ತೆರೆಯಲು ಸಾಧ್ಯವಾಗುತ್ತಿಲ್ಲ, ಇನ್ನು ಕೆಲವು ಹೊಟೇಲ್ ಗಳನ್ನು ನವೀಕರಿಸಬೇಕೆಂದು ತೆರೆಯುತ್ತಿಲ್ಲ.

