ಕ್ರೀಡೆಐಎಸ್ಎಲ್: ಬೆಂಗಳೂರು ತಂಡಕ್ಕೆ ಜಯ, ಎರಡನೇ ಸ್ಥಾನಕ್ಕೆ ಬಡ್ತಿ
ಭರವಸೆಯ ಆಟಗಾರ ನಿಶು ಕುಮಾರ್ ಅವರು ಬಾರಿಸಿದ ಗೋಲಿನ ಸಹಾಯದಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ 1-0ಯಿಂದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಹೈದರಾಬಾದ್ ಎಫ್.ಸಿ ತಂಡವನ್ನು ಸೋಲಿಸಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.