ವಿದೇಶWHO ಮತ್ತೊಂದು ಎಡವಟ್ಟು ಬಹಿರಂಗ: ಕೊರೋನಾ ರೋಗಿಗಳಿಗೆ HCQ ಮಾರಕ ಎಂದಿದ್ದ ವರದಿ ಹಿಂದಕ್ಕೆ!
ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಮತ್ತೊಂದು ಎಡವಟ್ಟು ಬಹಿರಂಗವಾಗಿದ್ದು, ಈ ಹಿಂದೆ WHO ಕೊರೋನಾ ರೋಗಿಗಳಿಗೆ HCQ ಮಾರಕ ಎಂದು ಹೇಳಿ ಅದರ ಬಳಕೆ ಮೇಲೆ ನಿರ್ಬಂಧ ಹೇರಿತ್ತು. ಆದರೆ ಇದೀಗ ಕೊರೋನಾ ರೋಗಿಗಳಿಗೆ HCQ ಮಾರಕ ಎಂಬ ವರದಿಯನ್ನೇ ಹಿಂದಕ್ಕೆ ಪಡೆದುಕೊಳ್ಳಲಾಗಿದೆ.