ವಿಶ್ವ ಮಹಿಳಾ ದಿನಹೆಣ್ಣಿನ ಜೀವಂತಿಕೆಗೇ ಸವಾಲಾದ ಆ ಒಂದು 'ಸಂಪ್ರದಾಯ'!
ಮಹಿಳೆಯರನ್ನು ಶೋಷಣೆ ಮಾಡಿಕೊಂಡು ಬಂದಿರುವ ಅದೆಷ್ಟೋ ಅನಿಷ್ಟ ಸಂಪ್ರದಾಯಗಳು ಪ್ರಪಂಚದಾದ್ಯಂತ ಅನಾದಿ ಕಾಲದಿಂದಲೂ ಜಾರಿಯಲ್ಲಿವೆ. ಅಂತಹ ಸಂಪ್ರದಾಯಗಳಲ್ಲಿ ಶೋಷಣೆಯಷ್ಟೇ ಅಲ್ಲದೇ ದೈಹಿಕ ಯಾತನೆ, ಮಾನಸಿಕ ಹಿಂಸೆಯ ಜೊತೆಗೆ ಜೀವವೇ ಪಣಕ್ಕಿಡಬೇಕಾದ, ಹೆಣ್ಣಿನ ಜನನಾಂಗವನ್ನು ಕತ್ತರಿಸುವ ಸಂಪ್ರದಾಯವೂ ಒಂದು. ವಿಶ್ವದೆಲ್ಲೆಡೆಯೂ ನಡೆದುಕೊಂಡು ಬಂದಿರುವ ಈ ಪಿಡುಗಿನಿಂದ ಭಾರತವೇನ